ಮತದಾರರ ವಿಶ್ವಾಸ ಕಳೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳು : ಡಾ. ಪ್ರಕಾಶ್ ಕಮ್ಮರಡಿ,


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ4: ರಾಜ್ಯದ ಜನತೆ ರಾಜಕೀಯ ಪಕ್ಷಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮೇಲೆ ಜನತೆಗೆ ಭರವಸೆ ಇಲ್ಲವಾಗಿದೆ.
ಮತದಾರರು ಹೊಸತನ ಹಾಗೂ ಹೊಸ ಭರವಸೆಯ ನಾಯಕರನ್ನು ಮತ್ತು ಪಕ್ಷವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಕೃಷಿ ಆರ್ಥಿಕ ತಜ್ಞ,  ಕರ್ನಾಟಕ ಕೃಷಿ ಬೆಲೆ ಆಯೋಗ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನತೆ ಹೊಸ ಪಕ್ಷಗಳ, ಹೊಸ ಭರವಸೆಯ ನಾಯಕರನ್ನು ನಿರೀಕ್ಷಿಸುತ್ತಿದ್ದಾರೆ ಎಂದರು.
ಮುಕ್ತ ಮತದಾನ, ಸಮರ್ಥ ಸರ್ಕಾರ ಜನತೆ ನಿರೀಕ್ಷಿಸುತ್ತಿದ್ದಾರೆ ಎಂಬುದು ರಾಜ್ಯದಾದ್ಯಂತ ಕೈಗೊಂಡ ಸಮೀಕ್ಷೆ ಆಧಾರಿತ ಸ್ವತಂತ್ರ ಅಧ್ಯಯನ ತಿಳಿಸುತ್ತದೆ ಎಂದರು.
ಸಮಗ್ರ ವರದಿಯನ್ನು ಬಿಡುಗಡೆ ಮಾಡಿ‌ ಮಾತನಾಡಿದ ಅವರು, ಸುಳ್ಳು ಭರವಸೆ, ಕೋಮು ಸಂಘರ್ಷ, ಭ್ರಷ್ಟಾಚಾರ ರಹಿತ ಹೊಸ ಬಗೆಯ ನಾಯಕರನ್ನು ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಆಶೆಯ ವ್ಯಕ್ತಪಡಿಸಿದ್ದಾರೆ ಎಂದರು.
ನಂತರ ಸಂವಾದದಲ್ಲಿ ಜನರ ನೈಜ ಸಮಸ್ಯಗಳು ಮುನ್ನೆಲೆಗೆ ಬರಲಿ ಎಂಬ ಆಶೆಯವನ್ನು ವರದಿ ವಿಸ್ತೃತವಾಗಿ ಸ್ಪಷ್ಟಪಡಿಸಿದೆ ಎಂದರು. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಕಲ್ಯಾಣ ಕರ್ನಾಟಕ, ಮುಂಬಯಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಯುವ, ಹಿರಿಯ ಹಾಗೂ ಎಲ್ಲಾವರ್ಗದ ಜನರನ್ನು ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲಾಗಿತು ಎಂದರು. ಎಲ್ಲಾ ಹಂತದ ಸಾರ್ವಜನಿಕರು ವಿಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಚುನಾವಣಾ ಸಂದರ್ಭದಲ್ಲಿ ನಡೆಯುವ ವಿಷಯಗಳು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ಮತ್ತು ಹಣಕಾಸು ತಜ್ಞ ಜಿ ವಿ ಸುಂದರ, ಸಂಘಟನೆಯ ಮಹಾಂತೇಶ ಕೊತ್ತಬಾಳ, ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಭೀಮಸೇನ್ ಕಲಿಕೇರಿ ಪಾಲ್ಗೊಂಡಿದ್ದರು.