ಮತದಾರರ ವಿಶ್ವಾಸಕ್ಕೆ ತಕ್ಕಂತೆ ಕೆಲಸವನ್ನು ಮಾಡಿ

ಆಳಂದ:ಜ.5:ಗ್ರಾಪಂ ಚುನಾವಣೆಯಲ್ಲಿ ಜ£ರುÀ ನೀಡಿದ ತೀರ್ಪಿಗೆ ತೆಲೆಬಾಗಿ ಪಕ್ಷಗಳನ್ನು ನೋಡದೆ ಪ್ರತಿಯೊಬ್ಬರು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜಕೀಯ ಹಿರಿಯ ಮುಖಂಡ ಚಂದ್ರಾಮಪ್ಪ ಘಂಟೆ ಅವರು ಸಲಹೆ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬಲದ ಮೇಲೆ ಆರಿಸಿಬಂದಿದ್ದೇವೆ ಎನ್ನುವುದು ಸರಿಯಲ.್ಲ ಈ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪಕ್ಷದ ಚಿನ್ನೆಗಳೆ ಇಲ್ಲ. ಜನ ವ್ಯಕ್ತಿಗಳನ್ನು ನೋಡಿ ವಿಶ್ವಾದಿಂದ ಮತ ನೀಡಿ ಗೆಲ್ಲಿಸಿದ್ದಾರೆ. ಮತದಾರರ ವಿಶ್ವಾಸಕ್ಕೆ ತಕ್ಕಂತೆ ಕೆಲಸವನ್ನು ಮಾಡಿ ಮೆಚ್ಚಿಗೆ ಪಡೆದು ರಾಜಕೀಯದಲ್ಲಿ ಬೆಳೆಯಬೇಕು ಎಂದು ಅವರು ಹೇಳಿದರು.

ರಾಜಕಾರಣ ಕೇವಲ ಚುನಾವಣೆಗೆ ಮಾತ್ರ ಸೀಮಿತಗೊಳಿಸಬೇಕೇ ಹೊರತು ವರ್ಷವೀಡಿ ರಾಜಕೀಯ ದ್ವೇಷವನಿಟ್ಟಿಕೊಂಡರೆ ಗ್ರಾಮಗಳ ಅಭಿವೃದ್ಧಿಗೆ ಮಾರಕವಾಗಿ ಮುಂದಿನ ಪೀಳ್ಗೆಯು ಎಂದಿಗೂ ಕ್ಷಮಿಸಲಾರರು. ಗ್ರಾಪಂಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಅದನ್ನು ಪ್ರಾಮಾಣಿಕವಾಗಿ ಪರ ವಿರೋಧಿಗಳು ಸೇರಿಕೊಂಡು ಜನ ಹಿತಕ್ಕಾಗಿ ಸಾರ್ಥಕಡಿಸಬೇಕು ಎಂದರು.

ಮತ ರಾಜಕಾರಣ ಹಾಗೂ ದ್ವೇಷದಿಂದ ಏನನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಇಂದು ಎಲ್ಲಡೆ ದ್ವೇಷವೇ ಹೆಚ್ಚಾಗಿತ್ತಿರುವುದು ಆತಂಕ ಮೂಡಿಸುತ್ತಿದೆ. ರಾಜಕಾರಣ ಇದೊಂದು ಸಮಾಜ ಸೇವೆಯೇ ಹೊರತು ದಂಧೆಯಲ್ಲ ಎಂಬುದು ಅರಿತುಕೊಳ್ಳಬೇಕು. ರಾಜಕೀಯಕ್ಕೆ ಬರುವ ಯುವಕರನ್ನು ಒಳ್ಳೆಯ ಕೆಲಸಕ್ಕೆ ಹಿರಿಯ ರಾಜಕಾರಣಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸೂಕ್ತ ಮಾರ್ಗದರ್ಶನ ಸಲಹೆಗಳನ್ನು ನೀಡುವ ಕೆಲಸ ಮಾಡಬೇಕು. ಸರ್ಕಾರಿ ಸೌಲಭ್ಯಗಳಿಂದ ಬಡವರನ್ನು ನಿರ್ಗತಿಕರನ್ನು, ಕಾರ್ಮಿಕರು, ರೈತರು, ಶೋಷಿತರನ್ನು ವಂಚನೆ ಆಗದಂತೆ ಎಚ್ಚರವಹಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಬೇಕು ನೂತನ ಸದಸ್ಯರಿಗೆ ಅವರು ಕಿವಿಮಾತು ಹೇಳಿದರು.