ಮತದಾರರ ಮನಮುಟ್ಟುವಲ್ಲಿ ಯಶಸ್ವಿಯಾದ 11 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಗೋವಿಂದರಾಜುಲು

ಬಳ್ಳಾರಿ: ನಾಡಿದ್ದು ಮತದಾನ ನಡೆಯುವ ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯ 11 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಗೋವಿಂದ ರಾಜುಲು ತಮ್ಮ ಗೆಲುವಿಗಾಗಿ ಮತದಾರರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಬಹುದು.
ಏಕೆಂದರೆ ಅವರು ಮತ್ತು ಮಾಜಿ ಕಾಪೊರೇಟರ್ ಆಗಿರುವ ಅವರ ತಂದೆ ಎಗ್ ಕುಮಾರಸ್ವಾಮಿ ಅವರು ವಾರ್ಡಿನಲ್ಲಿ ಸಂಚರಿಸುತ್ತಿದ್ದರೆ. ಅವರಿಗೆ ಮತದಾರರೇ ಹೂ ಮಾಲೆ ಹಾಕಿ ಸ್ವಾಗಿತಿಸುತ್ತಿದ್ದಾರೆ. ಕಾರಣ ಸಮಾಜ ಸೇವೆಯಲ್ಲಿ ತಂದೆ ಮತ್ತು ಮಗ ಇಬ್ಬರು ಸರಿ ಸಮಾನರು. ಈ ಹಿಂದೆ ತಂದೆಯವರು ಕಳೆದ ವರ್ಷ ಕರೋನಾ ಸಂಕಷ್ಟ ಕಾಲದಲ್ಲಿದ್ದ ನಮಗೆ ಆಹಾರ ದಾನ್ಯದ ಕಿಟ್‍ಗಳನ್ನು ವಿತರಿಸಿ ಹಸಿದ ಹೊಟ್ಟೆಗಳನ್ನು ತುಂಬಿಸಿದ್ದರು, ಅದನ್ನು ಹೇಗೆ ಮರೆಯಲು ಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.
ಅಷ್ಟೇ ಅಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ಸದಾ ಸಹಾಯದ ಹಸ್ತ ಚಾಚುವ ಕುಮಾರಸ್ವಾಮಿ ಅವರನ್ನು ವಾರ್ಡಿನ ಮತದಾರ ಮರೆತಿಲ್ಲ. ನಿಮ್ಮಂತವರೇ ನಮ್ಮ ವಾರ್ಡಿಗೆ ಬೇಕು, ಬೇರೆ ಯಾರು ಏನೇ ಹೇಳಲಿ ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎನ್ನುವುದನ್ನು ಕಂಡರೆ ಗೆಲುವಿನ ಹಾದಿಯತ್ತ ಸಾಗುತ್ತಿದ್ದಾರೆ ಎನ್ನುವ ಅಂಶ ಕಾಣುತ್ತಿದೆ. ಏನೇ ಆದರೂ ನಾಡಿದ್ದು ಮತದಾರರು ಮತಯಂತ್ರದಲ್ಲಿ ತಮ್ಮ ಈ ನಿರ್ಧಾರವನ್ನು ಬಟನ್ ಒತ್ತಿ ಸ್ಪಷ್ಟಪಡಿಸಬೇಕಿದೆ.
ತಮ್ಮನ್ನು ಭೇಟಿ ಮಾಡಿದ ಸಂಜೆವಾಣಿಯೊಂದಿಗೆ ಮಾತನಾಡಿದ ಎಗ್ ಕುಮಾರಸ್ವಾಮಿ ಅವರು ನಮಗೆ ರಾಜಕೀಯ ಹಣ ಮಾಡಲು ಬೇಕಿಲ್ಲ, ವ್ಯಾವಾರವಹಿವಾಟಿನಿಂದ ಸಾಕಷ್ಟು ದೇವರು ದಯಪಾಲಿಸಿದ್ದಾನೆ. ಜನ ಸೇವೆಗೆ ಇದೊಂದು ಅವಕಾಶವನ್ನು ಮತದಾರರು ಕಲ್ಪಿಸಬೇಕು ಎಂದರು.