ಮತದಾರರ ಪಟ್ಟಿ ಪರಿಷ್ಕರಣೆ: ರಾಜಕೀಯ ಪಕ್ಷಗಳ ಸಹಕರಕ್ಕೆ ಮನವಿ

ದಾವಣಗೆರೆ, ನ.೧೦; ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ನವೆಂಬರ್ 9ರ ಬುಧುವಾರ  ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಡಿಸೆಂಬರ್ 08 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಹೊಸದಾಗಿ ಮತದಾರರ ಸೇರ್ಪಡೆ ಮಾರ್ಪಾಡು ಹಾಗೂ ಹೆಸರುಗಳ ತಿದ್ದುಪಡಿ ಕುರಿತಂತೆ ಪರಿಶೀಲನೆ ನಡೆಸಲಿದ್ದಾರೆ.  ಸಾರ್ವಜನಿಕರು ವಿವಿಧ ರಾಜಕೀಯ ಪಕ್ಷಗಳು ಸಹಕರಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮನವಿ ಮಾಡಿಕೊಂಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರುಡು ಮತದಾರರ ಪಟ್ಟಿ ಪ್ರಕಟ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ ಅವರು ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ಜಿಲ್ಲೆಯ 1683 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಪರಿಷ್ಕರಣೆ ಕಾರ್ಯ ನಡೆಯಲಿದೆ. 18 ವರ್ಷ ತುಂಬಿದ ಯುವಕರಿಂದ ಯಾವುದೇ ವ್ಯಕ್ತಿ ಮತದಾನದ ಹಕ್ಕಿನಿಂದ ಹೊರಗೆ ಉಳಿಯಬಾರದು ಇಂದು ಪ್ರಕಟಿಸಲಾದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳ ಬೇಕು ಪರಿಷ್ಕರಣೆ ಹಾಗೂ ಸೇರ್ಪಡೆಗೆ ನಿಗಧಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ  ಗಳಿಗೆ ಸಲ್ಲಿಸುವಂತೆ ತಿಳಿಸಿದರು.    ಯುವಕರು ಮತದಾರರು ರಾಜಕೀಯ ಪಕ್ಷಗಳು ಈ ಕಾರ್ಯಕ್ರಮದಲ್ಲಿ ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಮತದಾರರ ನೋಂದಣಿ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸುವಂತೆ ಸಭೆಯಲ್ಲಿ ಮನವಿ ಮಾಡಿಕೊಂಡರು.ಪರಿಷ್ಕರಣಾ ಚಟುವಟಿಕೆ: ಇಂದಿನಿಂದ ಎರಡು ತಿಂಗಳ ಕಾಲ ಮತದಾರರ ಪರಿಷ್ಕರಣಾ ಕಾರ್ಯ ನಡೆಯಲಿದೆ ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅರ್ಹತಾ ದಿನಾಂಕ 01-01-2023ಕ್ಕೆ ಸಂಬಂಧಿಸಿದಂತೆ ಇಂದು ನವಂಬರ್ 09 ರಂದು ಕರುಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನವಂಬರ್ 09 ರಿಂದ ಡಿಸೆಂಬರ್ 08 ರವರೆಗೆ ಆಕ್ಷೇಪಣೆಗಳು ಅವಕಾಶ ಕಲ್ಪಿಸಲಾಗಿದೆ ಮತದಾರರ ಪರಿಷ್ಕರಣೆಗೆ 04 ವಿಶೇಷ ಅಭಿಯಾನವನ್ನು ಹಮ್ಮಿಕೊಂಡು ಪ್ರತಿ ಬೂತ್ ನಲ್ಲೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೆಸರುಗಳ ತಿದ್ದುಪಡ್ಡಿ ವಿಳಾಸ ಬದಾಲಾವಣೆ ಹೊಸ ಮತದಾರರ ಸೇರ್ಪಡೆ ಕುರಿತಂತೆ ನವಂಬರ್ 12, ಮತ್ತು 20ಡಿಸೆಂಬರ್ 03 ಮತ್ತು 04 ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಡಿಸೆಂಬರ್ 26 ರೊಳಗೆ ಮತದಾರರಿಂದ ಸ್ವೀಕರಿಸಿ ಎಲ್ಲಾ ಆಕ್ಷೇಪಣೆಗಳನ್ನು ವಿಲೇವಾರಿಗೊಳಿಸಿ ಜನವರಿ 05,2023 ರಂದು ಅಂತಿಮ ಕರುಡು ಪ್ರತಿ ಪ್ರಕಟಿಸಲಾಗುವುದು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು