ಮತದಾರರ ಪಟ್ಟಿ ಪರಿಷ್ಕರಣೆ ನಂತರ 17,276 ಮತದಾರರ ಸೇರ್ಪಡೆ

ದಾವಣಗೆರೆ ಜ.6; ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರದ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಪ್ರಕಟಿಸಿದ್ದಾರೆಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 17,276  ಮತದಾರರು ಹೆಚ್ಚಳವಾಗಿದ್ದಾರೆ. ಪರಿಷ್ಕರಣೆಗೆ ಮುಂಚೆ 13,88,434 ಮತದಾರರಿದ್ದರು ಎಂದು ಹೇಳಿದರು.ಪರಿಷ್ಕರಣೆ ನಂತರ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1,89,209, ಹರಿಹರದಲ್ಲಿ 2,02,813, ದಾವಣಗೆರೆ ಉತ್ತರದಲ್ಲಿ 2,32,014, ದಕ್ಷಿಣದಲ್ಲಿ 2,04,442, ಮಾಯಕೊಂಡದಲ್ಲಿ 1,87,676, ಚನ್ನಗಿರಿಯಲ್ಲಿ 1,95,797 ಹಾಗೂ ಹೊನ್ನಾಳಿಯಲ್ಲಿ 1,93,763  ಮತದಾರರಿದ್ದಾರೆ.
ಪುರುಷ ಮತದಾರರ ಸಂಖ್ಯೆ 7,05,23, ಮಹಿಳಾ ಮತದಾರರು 7,00,357 ಹಾಗೂ ಇತರರು 120. ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷ ಮತದಾರರಿಗೆ 993 ಮಹಿಳಾ ಮತದಾರರಿದ್ದಾರೆ ಎಂದವರು ಹೇಳಿದರು.ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿದ್ದು, 103-ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 262 ಮತಗಟ್ಟೆಗಳು, 262 ಮತಗಟ್ಟೆ ಅಧಿಕಾರಿಗಳು, 26 ಮೇಲ್ವಿಚಾರಕರು, 105-ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ 228 ಮತಗಟ್ಟೆಗಳು, 228 ಮತಗಟ್ಟೆ ಅಧಿಕಾರಿಗಳು, 24 ಮೇಲ್ವಿಚಾರಕರು, 106-ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 242 ಮತಗಟ್ಟೆಗಳು, 242 ಅಧಿಕಾರಿಗಳು, 23 ಮೇಲ್ವಿಚಾರಕರು, 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 212 ಮತಗಟ್ಟೆಗಳು, 212 ಮತಗಟ್ಟೆ  ಅಧಿಕಾರಿಗಳು, 20 ಮೇಲ್ವಿಚಾರಕರು, 108-ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 240 ಮತಗಟ್ಟೆಗಳು, 240 ಮತಗಟ್ಟೆ ಅಧಿಕಾರಿಗಳು, 24 ಮೇಲ್ವಿಚಾರಕರು, 109-ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 254 ಮತಗಟ್ಟೆಗಳು, 254 ಮತಗಟ್ಟೆ ಅಧಿಕಾರಿಗಳು, 25 ಮೇಲ್ವಿಚಾರಕರು, ಮತ್ತು 110-ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ 245 ಮತಗಟ್ಟೆಗಳು, 245 ಮತಗಟ್ಟೆ ಅಧಿಕಾರಿಗಳು, 24 ಮೇಲ್ವಿಚಾರಕ ಅಧಿಕಾರಿಗಳನ್ನು ಹೊಂದಿದ್ದು, ಒಟ್ಟಾರೆಯಾಗಿ 1683 ಮತಗಟ್ಟೆಗಳು, 1683 ಮತಗಟ್ಟೆ ಅಧಿಕಾರಿಗಳು, 166 ಮೇಲ್ವಿಚಾರಕರ ಅಧಿಕಾರಿಗಳನ್ನು ಒಳಗೊಂಡಿದೆ ಎಂದು ಹೇಳಿದರು.