ಮತದಾರರ ಪಟ್ಟಿ ಪರಿಷ್ಕರಣೆ ಅನಿಲ್ ಕುಮಾರ್

ಕೊಟ್ಟೂರು ನ 02 :ತಾಲೂಕಿನ ಉಜ್ಜಿನಿಗ್ರಾಮದಲ್ಲಿ ತಹಶೀಲ್ದಾರರಾದ ಶ್ರೀ ಅನಿಲ್ ಕುಮಾರ್ ಅವರೊಂದಿಗೆ ಚರ್ಚೆಭಾಗವಹಿಸಿದವರು: ಶ್ರೀಧರ್ ಶೆಟ್ಟಿ ಖಜಾಂಚಿ, ರೇವಯ್ಯಒಡೆಯರ್,
ಗ್ರಾಮ‌ಸ್ವರಾಜ್ಯ, ಬಿಎಲ್ಒಗಳಾದ ಶ್ರೀ ಚನ್ನೇಶ್, ಪ್ರಕಾಶ್, ವೀರಭದ್ರಪ್ಪ, ಗುರುಮೂರ್ತಿ, ಕೊಟ್ರೇಶ್, ಬಸವರಾಜ್, ಕುಮಾರ ಸ್ವಾಮಿ, ಸಿದ್ದಲಿಂಗಪ್ಪ, ಶರಣಪ್ಪ, ಹರೀಶ್ ಗೌಡರು, ಮಹಾಂತೇಶ್, ನಾಗರಾಜ್ ವೈ, ಸಂತೋಷ್ ಮೊದಲಾದವರು.
ಉಜ್ಜಯಿನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳ ಮತದಾರಪಟ್ಟಿಯಲ್ಲಿ ದೋಷಗಳನ್ನು ಸರಿಪಡಿಸುವ, ಸತ್ತ ವ್ಯಕ್ತಿಗಳ ಕೈ ಬಿಡುವುದು, ವರ್ಗವಾದ ಮತದಾರರನ್ನು ಕೈಬಿಡುವುದು ಹಾಗೂ ಅದಲಿ ಬದಲಿಯಾದ ವಾರ್ಡ್ ಮತದಾರರನ್ನು ಒಂದು ಕಡೆ ನಿಶ್ಚಿತಗೊಳಿಸುವುದು.
ಇದರಿಂದ ಚುನಾವಣಾ ಸಂದರ್ಭದ ಗೊಂದಲ ನಿವಾರಣೆ, ೮೦-೯೦% ಮತದಾನ, ಸರ್ಕಾರಿ ಸೌಲಭ್ಯ ನೀಡಲು ಅನುಕೂಲ. ಇದಕ್ಕಾಗಿ ವಿಶೇಷ ಅಭಿಯಾನವನ್ನು ಗ್ರಾಮ ಸ್ವರಾಜ್ಯ ಕೈಗೊಂಡಿದೆ. ಈ ಕುರಿತಾದ ಸಾಧಕ ಬಾದಕಗಳ ಚರ್ಚಿಸಲಾಯಿತು ಮತ್ತು ಇಂದಿನಿಂದಲೇ ಈ ಕೆಲಸ ಮಾಡಲು ಆರಂಭಿಸಲಾಯಿತು.