ಮತದಾರರ ಪಟ್ಟಿ ಆರೋಪ ನಿರಾಧಾರ : ದಯಾಸಾಗರ

ಇಂಡಿ:ನ.21:ಮತದಾರರ ಪಟ್ಟಿ ಸಂಬಂಧ ಕೇಳಿ ಬಂದಿರುವ ಆರೋಪ ನಿರಾಧಾರ, ಮತದಾರರ ಮಾಹಿತಿ ಸಂಗ್ರಹಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಆಕ್ರಮ ನಡೆದಿಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಮುಖ್ಯಮಂತ್ರಿಗಳು ತುರ್ತಾಗಿ ಸ್ಪಂದಿಸಿ ತನಿಖೆಗೆ ಆದೇಶಿಸಿದ್ದಾರೆ ಎಂದರು.

ಮತದಾರರ ಪಟ್ಟಿಯಿಂದ 6 ಲಕ್ಷ ಮತದಾರರ ಹೆಸರನ್ನು ಆಯೋಗ ಕೈಬಿಟ್ಟಿದೆ. ಆದರೆ 24 ಲಕ್ಷ ಮತದಾರರನ್ನು ಕೈ ಬಿಡಲಾಗಿದೆ ಎಂದು ಡಿ.ಕೆ.ಶಿವಕುಮಾರ ಆರೋಪ ನಿರಾಧಾರವಾಗಿದೆ ಎಂದರು.

ವೋಟರ್ ಲಿಸ್ಟನಲ್ಲಿ ಕಾಂಗ್ರೆಸ್ ಬೆಂಬಲಿತ ಮತದಾರರ ಹೆಸರನ್ನು ಕೈ ಬಿಡಲಾಗಿದೆ ಎಂದು ಜವಾಬ್ದಾರಿ ಸ್ಥಾನದಲ್ಲಿರುವವರು ಹೇಳುವದು ಪಕ್ಷಕ್ಕೆ ಘನತೆ ತರುವದಿಲ್ಲ, ಮತದಾರರ ಯಾದಿಯಲ್ಲಿ ಮರಣಹೊಂದಿದ, ಎರಡು ಕಡೆ ಹೆಸರು ಹೊಂದಿದವರ ಹೆಸರನ್ನು ಮಾತ್ರ ತೆಗೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭೀಮಸಿಂಗ ರಾಠೋಡ, ಕಲ್ಲನಗೌಡ ಬಿರಾದಾರ,ಶ್ರೀಶೈಲಗೌಡ ಬಿರಾದಾರ,ಶಾಂತು ಕಂಬಾರ,ಗೌಡಪ್ಪಗೌಡ ಪಾಟೀಲ,ಶಾಂತು ಪಾಟೀಲ ಮತ್ತಿತರಿದ್ದರು.