ಮತದಾರರ ಪಟ್ಟಿಯಲ್ಲಿನ ಹೆಸರು ಡಿಲೀಟ್: ಆಕ್ರೋಶ

ವಾಡಿ:ಮಾ.12: ಪಟ್ಟಣದ ವಾರ್ಡ್ 3ರಲ್ಲಿನ ಸೇವಾಲಾಲ್ ನಗರ ತಾಂಡಾದ ಮತದಾರ ಪಟ್ಟಿಯಲ್ಲಿ ಹೊಸದಾಗಿ ಹೆಸರುಗಳ ಸೇರ್ಪಡೆ ಮಾಡುತ್ತಿಲ್ಲ ಹಾಗೂ ಮತದಾರ ಪಟ್ಪಿಯಲ್ಲಿಯನ ಹಲವು ಹೆಸರುಗಳನ್ನು ಡಿಲೀಟ್ ಮಾಡುವ ಮೂಲಕ ತಾಲೂಕ ಅಧಿಕಾರಿಗಳು ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಶಂಕರ (ಸಾಹುಕಾರ) ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ವಾರ್ಡ್ 3ರಲ್ಲಿನ ಬೂತ್ ಮಟ್ಟದ ಬಿಎಲ್‍ಒ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕ ಆಡಳಿತ ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆಗಾಗಿ ಸ್ಥಳಿಯವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಆದರೆ ಅವರಿಗೆ ಪರಿಷ್ಕರಣೆ ಮಾಡುವ ಕುರಿತು ಯಾವುದೇ ತರಬೇತಿ ನೀಡದ ಕಾರಣ ಮತದಾರ ಪಟ್ಟಿಯಲ್ಲಿನ ಸಮಸ್ಯೆ ತೀವ್ರಗತಿ ಪಡೆದುಕೋಳ್ಳುತ್ತಿದೆ. ತಿದ್ದುಪಡೆ, ಸೇರ್ಪಡೆ ಮತ್ತು ಹೆಸರು ಕೈ ಬಿಡುವುದರ ಬಗ್ಗೆ ಬಿಎಲ್‍ಒಗಳಿಗೆ ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುವ ಮೂಲಕ ಜಾರಿಕೊಳುತ್ತಿದ್ದಾರೆ ಎಂದು ದೂರಿದ್ದಾರೆ.

ಅಧಿಕಾರಿಗಳು ಮಾಡುವ ಎಡವಟ್ಟನಿಂದ ಮತದಾರರು ಕಂಗಾಲಾಗಿದ್ದಾರೆ. ಇದ್ದಕ್ಕಿದ್ದಂತೆ ತಮ್ಮ ಮತ ಪಟ್ಟಿಯಲ್ಲಿನ ಹೆಸರು ಡಿಲೀಟ್ ಆಗುತ್ತಿರುವುದ್ದರಿಂದ ಪ್ರಜ್ಞಾನವಂತರು ಪ್ರಶ್ನೆ ಮಾಡುವಂತಾಗಿದೆ. ಮತಪಟ್ಟಿಯಲ್ಲಿನ ಸಮಸ್ಯೆ ಪರಿಹರಿಸದಿದ್ದರೆ ಸಾರ್ವಜನಿಕರನ್ನು ಒಗ್ಗೂಡಿಸಿ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಶಂಕರ ಜಾಧವ್ ಎಚ್ಚರಿಕೆ ನೀಡಿದ್ದಾರೆ.