ಮತದಾರರ ಪಟ್ಟಿಗೆ ಆಧಾರ ಜೋಡಣೆ ಕುರಿತು ತರಬೇತಿ

ಚಿಂಚೋಳಿ,ಆ.4- ಮತದಾರ ಪಟ್ಟಿಗೆ ಆಧಾರ ಸಂಖ್ಯೆ ಜೋಡಿಸುವ ಮೂಲಕ ಪರಿಷ್ಕರಣೆ ಮತ್ತು ಕರಡು ಮತದಾರರ ಪಟ್ಟಿ ಸಿದ್ದಪಡಿಸಲು ಮತದಾರರ ಆಧಾರ ಸಂಖ್ಯೆಯನ್ನು ಜೋಡಿಸಲು ಮತಗಟ್ಟೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ತಹಸೀಲ್ದಾರ ಅಂಜುಮ್ ತಬಸ್ಸುಮ್ ಹೇಳಿದರು.
ಮಾಸ್ಟರ್ ಟ್ರೇನರ್ ಮಲ್ಲಿಕಾರ್ಜುನ ಪಾಲಾಮೂರ್ ರವರು ಗರುಡ ಆ್ಯಪ್ ಬಳಸಿ ಮತದಾರ ಪಟ್ಟಿಗೆ ಆಧಾರ ಸಂಖ್ಯೆ ಜೋಡಣೆ ಕುರಿತಾದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರು ಗಿಔಖಿಇಖ ಊಇಐPಐIಓಇ ಂPP ಬಳಸಿ ತಾವೇ ಆನಲೈನ್ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಆಧಾರಜೋಡಣೆ ಮಾಡುವುದರ ಕುರಿತು ಮಲ್ಲಿಕಾರ್ಜುನ ಪಾಲಾಮೂರ್ ಸವಿವರವಾಗಿ ತಿಳಿಸಿದರು.
ಚುನಾವಣಾ ಸಿರಸ್ತೆದಾರ ಸಭಾಸ ನಿಡಗುಂದಾ, ಶೋಯಬ್, ಮಲ್ಲಿಕಾರ್ಜುನ ಮರಪಳ್ಳಿ, ಅನೇಕ ಅಂಗನವಾಡಿ ಕಾರ್ಯಕರ್ತರು ಮತ್ತು ತಹಶೀಲ್ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗಿಯಾಗಿದ್ದರು.