
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 14:- ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ ಮತದಾರರಿಗೂ ನನ್ನ ಎಲ್ಲಾ ಹಿತೈಷಿಗಳಿಗೂ, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೂ ತುಂಬುಹೃದಯದ ಕೃತಜ್ಞತೆಯನ್ನು ಸಲ್ಲಿಸಿದ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕೇಶ ವಿ ನಾಯಕ ಪ್ರಜಾಪ್ರಭುತ್ವದ ಮತದಾರರ ತೀರ್ಪುಗೆ ನಾನು ತಲೆಬಾಗುವೆ ಎಂದು ತಿಳಿಸಿದ್ದಾರೆ.
ರಾಜ್ಯದ ಹಿಂದುಳಿದ ತಾಲೂಕಿನಲ್ಲಿ ಒಂದಾಗಿರುವ ಕೂಡ್ಲಿಗಿ ಕ್ಷೇತ್ರದ ನೂತನ ಶಾಸಕರಾಗಿರುವ ಡಾ ಶ್ರೀನಿವಾಸ ಅವರಿಗೆ ಸ್ನೇಹಪೂರ್ವಕ ಶುಭಕೋರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೆ ಕೋರುವುದಾಗಿ ಲೋಕೇಶ ವಿ ನಾಯಕ ತಿಳಿಸಿದರು.