ಮತದಾರರ ತೀರ್ಪಿಗೆ ತಲೆಬಾಗುತ್ತೇವೆ.‌ಸಿದ್ದರಾಮಯ್ಯ

ಬಾಗಲಕೋಟೆ, ನ. 10- ಉಪ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಉಪ ಸಮರದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಶಿರಾದಲ್ಲಿ‌ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆ ಇತ್ತು. ಆರ್. ಆರ್ ನಗರದಲ್ಲಿ ಬಿಜೆಪಿಗೆ ಫೈಟ್ ಕೊಡುತ್ತೇವೆ ಎಂಬುದಾಗಿ ಅಂದುಕೊಂಡಿದ್ದೆವು. ಆದರೆ ಪ್ರಜಾಪ್ರಭುತ್ವ ‌ ವ್ಯವಸ್ಥೆಯಲ್ಲಿಮತದಾರರು ನೀಡಿರು ತೀರ್ಪು ಒಪ್ಪೊಕೊಳ್ಲಬೇಕಾಗುತ್ತದೆ ಎಂದು ಬಾದಾಮಿಯಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿದರು.
ಆಡಳಿತ ಇರುವವರು ಮುಕ್ತ ಮತ್ತು ನ್ಯಾಯಯತವಾಗಿ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿರುತ್ತಾರೆ. ಆದರೆ ಬಿಜೆಪಿ ಸರ್ಕಾರ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದರು.
ಉಪಚುನಾವಣೆಯ ನಂತರ ಸಿಎಂ ಕೆಳಗಿಳಿಯುತ್ತಾರೆಂಬ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ತಮಗಿರುವ ಮಾಹಿತಿ ಪ್ರಕಾರ ಸಿಎಂ ಯಡಿಯೂರಪ್ಪ ಕೆಳಗಿಳಿಯುತ್ತಾರೆ ಎಂದು ಪುನರುಚ್ವರಿಸಿದರು.