ಮತದಾರರ ಜಾಗೃತಿ ಜಾಥಾ: ವಿಶೇಷ ಚೇತನರಿಂದ ಬೈಕ್ ರ್ಯಾಲಿ

ಚಿತ್ರದುರ್ಗ.ಏ.೧೪: ಚಿತ್ರದುರ್ಗ ತಾಲ್ಲೂಕು ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಬಳ್ಳೇಕಟ್ಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಚೇತನರಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೃತಿ, ಅಂಗವಿಕಲರ ಪುನರ್ವಸತಿ ಕಾರ್ಯಕರ್ತರ ಅಧ್ಯಕ್ಷಜಿ.ಎಸ್.ಲಿಂಗರಾಜು, ವಿಆರ್‍ಡಬ್ಲ್ಯು ಎಸ್.ಚಿಕ್ಕಪ್ಪಯ್ಯ ಒಡೆಯರ್, ಬಿಎಲ್‍ಒ ಚಂದ್ರಶೇಖರ್, ಕಾರ್ಯದರ್ಶಿ ಕೆ.ಸುಧಾಮಣಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.