ಮತದಾರರ ಗಮನ ಸೆಳೆದ ಬಿಜೆಪಿ ರೋಡ್ ಷೋ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ನಗರದ ದುರ್ಗಮ್ಮ ದೇವಸ್ಥಾನದಿಂದ   ತಾಳೂರು  ರಸ್ತೆಯ ನಾಗಪ್ಪ ಕಟ್ಟೆವರೆಗೆ ಬಿಜೆಪಿ ಮುಖಂಡರ ರೊಇಡ್ ಷೋ ನಿನ್ನೆ ಸಂಜೆ ನಡೆಯಿತು.
ನಗರದ ಅಭ್ಯರ್ಥಿ  ಜಿ. ಸೋಮಶೇಖರ ರೆಡ್ಡಿ ಅವರೊಂದಿಗೆ, ಕೇಂದ್ರ ಇಂಧನ,   ಕೈಗಾರಿಕಾ  ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜರ ರೋಡ್ ಷೋನಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಶಾಸಕರು ಬಿಜೆಪಿಯಿಂದ ಮಾತ್ರ. ದೇಶದ ಸುಭದ್ರತೆ, ಸಂರಕ್ಷಣೆ ಸಾಧ್ಯ. ಭ್ರಷ್ಟತೆ ಇಲ್ಲದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದಲೇ ರಸ್ತೆ, ರೈಲ್ವೇ ಅಭಿವೃದ್ಧಿ ಗಮನ ಸೆಳೆಯುವಂತಾಗಿದೆ. ಹಿಮಾಲಯದ ಪ್ರದೇಶಗಳಲ್ಲಿಯೂ ರಸ್ತೆ ನಿರ್ಮಿಸಿ ಶತ್ರುಗಳ ದೇಶಗಳಿಗೆ ಭಯ ತರುವ ರೀತಿಯಲ್ಲಿ ಮಾಡಿದೆ. ಜೆಪಿಯಿಂದ ಮಾತ್ರ ದೇಶ, ರಾಜ್ಯಗಳ ಅಭಿವೃದ್ಧಿ ಎಂಬುದನ್ನು ಅರಿತು ಮತ ನೀಡಿ ಸೋಮಶೇಖರ ರೆಡ್ಡಿ ಅವರನ್ನು ಗೆಲ್ಲಿಸಿ  ಎಂದರು.
ಪಕ್ಷದ ಜಿಲ್ಲಾ ಅದ್ಯಕ್ಷ ಜಿ.ಮುರಹರಗೌಡ, ಪಾಲಿಕೆ ಸದಸ್ಯರುಗಳಾದ  ಟಿ.ಶ್ರೀನಿವಾಸ್ ಮೋತ್ಕರ್,  ಕೊನಂಕಿ ತಿಲಕ್, ಹನುಮಂತ ಕೆ, ಹನುಮಂತ ಗುಡಿಗಂಟಿ ಮುಖಂಡ ಎಸ್ ಮಲ್ಲನಗೌಡ, ನಗರದ ಅಧ್ಯಕ್ಷ ಕೆ. ಬಿ.ವೆಂಕಟೇಶ್ವರ , ಪ್ರದಾನ ಕಾರ್ಯದರ್ಶಿ  ರಮಾಂಜಿನಿ, ರಾಮ್ ಪ್ರಸಾದ್, ಬಳ್ಳಾರಿ ಜಿಲ್ಲಾ ಬಿಜೆಪಿ ಮಾಧ್ಯಮ ಸಹ ಸಂಚಾಲಕ ತೊಗರಿ ರಾಜೀವ್. ಮಹಿಳಾ ಮೋರ್ಚಾ ಪುಷ್ಪ ಲತಾ, ರೂಪ ಲಕ್ಷ್ಮಿದೇವಿ  ಮೊದಲಾದವರು ಪಾಲ್ಗೊಂಡಿದ್ದರು.