
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.20: ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ, ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ವೇಳೆ ಬರುವ ಜನರಲ್ಲಿ ಬಹುತೇಕರು ಮತದಾರರಾಗಿದ್ದಾರೆ.
ಇವರು ಯಾವ ಪಕ್ಷಕ್ಕೆ ಮತಹಾಕುತ್ತಾರೋ ಆ ದೇವರಿಗೇ ಗೊತ್ತು. ಆದರೆ ಆಯಾ ದಿನ ಯಾವ ಪಕ್ಷದ, ಪಕ್ಷೇತರ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಂದಿರುತ್ತಾರೋ ಅವರ ಪರ ಘೋಷಣೆ ಹಾಗು ಮತ ನೀಡಬೇಕು ಎಂದು ಕೇಳುವುದಷ್ಟೇ ಅಲ್ಲದೆ ತಮ್ಮ ಮತವೂ ಅದಕ್ಕೆಂದು ಹೇಳುತ್ತಾರೆ.
ಆದರೆ ಇವರಾರು ಒಂದೇ ಪಕ್ಷಕ್ಕೆ ಸೀಮಿತರಾಗಿ ಇರುವುದಿಲ್ಲ. ತಮ್ಮನ್ನು ಕರೆದುಕೊಂಡು ಹೋಗಿ ದಿನಗೂಲಿ ರೀತಿ ಹಣ ನೀಡುವ ವ್ಯಕ್ತಿ ಹೇಳಿದ ಪಕ್ಷದ, ಪಕ್ಷೇತರ ಅಭ್ಯರ್ಥಿಗಳ ಚಿನ್ಹೆಯ ಬಾವುಟ ಹಿಡಿಯುತ್ತಾರೆ.
ಅದಕ್ಕಾಗಿ ಇವರ ಕೈನಲ್ಲಿ ಒಂದು ದಿನ ಕೈ ಆದರೆ ಮತ್ತೊಂದು ದಿನ ಕಮಲ ಇರುತ್ತದೆ. ಮತ್ತೊಂದು ದಿನ ಪೊರಕೆ, ಮಗದೊಂದು ದಿನ ಪುಟ್ ಬಾಲ್, ಹುಲ್ಲಿನ ಹೊರೆ ಹೊತ್ತ ಮಹಿಳೆ ಹೀಗೆ ಬಗೆ ಬಗೆಯ ಬಾವುಟ ಇರುತ್ತವೆ. ಘೋಷಣೆ ಕೇಳುತ್ತವೆ.