ಮತದಾರರ ಕರಡು ಪಟ್ಟಿ ಪ್ರಕಟಃ 2023ರ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಃ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ವಿಜಯಪುರ ನ.10-ಚುನಾವಣಾ ಆಯೋಗದ ನಿರ್ದೇಶನದಂತೆ ನವೆಂಬರ್ 9 ರ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವನಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ನವೆಂಬರ್ 9 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ದಿನಾಂಕ: 09-11-2022 ರಿಂದ 08-12-2022 ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವುದು, ದಿನಾಂಕ : 12-11-2022, 20-11-2022, 03-12-2022 ಹಾಗೂ 04-12-2022 ವಿಶೇಷ ಪ್ರಚಾರ ದಿನಾಂಕಗಳು, ದಿನಾಂಕ : 26-12-2022 ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ : 05-01-2023 ರಂದು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ನವೆಂಬರ್ 9 ರಂದು ಜಿಲ್ಲಾ ಕೇಂದ್ರ ಸ್ಥಾನ ಹಾಗೂ ಎಲ್ಲ ತಾಲೂಕು ಮಟ್ಟದಲ್ಲಿ ಮತದಾರರ ಜಾಗೃತಿ ಕುರಿತು ಜಾಥಾವನ್ನು ಆಯೋಜಿಸಿ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಮತಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ದಿನದಂದು ಅಂದರೆ ದಿನಾಂಕ:09-11-2022 ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ “ಚುನಾವಣಾ ಪಾಠಶಾಲಾ” ಏರ್ಪಡಿಸಿ ಅದರಲ್ಲಿ ಮತದಾರರ ಪಟ್ಟಿಯನ್ನು ಓದುವ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ಹೇಳಿದರು.
ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವದನ್ನು (ಗಿoಣeಡಿ ಊeಟಠಿ ಟiಟಿe ಒobiಟe ಂಠಿಠಿ ಔಡಿ ಓಗಿSP Poಡಿಣಚಿಟ ಔಡಿ ತಿತಿತಿ.ಛಿeo.ಞಚಿಡಿಟಿಚಿಣಚಿಞಚಿ.gov.iಟಿ) ಮುಖಾಂತರ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬಹುದು. ಖಚಿತಪಡಿಸಿಕೊಂಡ ನಂತರ ಹೊಸದಾಗಿ ಮತದಾರ ಸೇರ್ಪಡೆಗೆ ನಮೂನೆ 6, ಮತದಾರರ ಗುರುತಿನ ಚೀಟಿಗೆ ಆಧಾರ ಸಂಖ್ಯೆ ಅಥವಾ ಇತರೆ ದಾಖಲೆಗಳ ಜೋಡಣೆ ಮಾಡಲು ನಮೂನೆ 6ಬಿ, ಮತದಾರ ಪಟ್ಟಿಯಿಂದ ತವ್ಮ್ಮ ಹೆಸರನ್ನು ತೆಗೆದು ಹಾಕಲು ನಮೂನೆ 7ನ್ನು, ಮತದಾರರ ಪಟ್ಟಿಯಲ್ಲಿನ ತಿದ್ದುಪಡಿ, ಬದಲಿ ಗುರುತಿನ ಚೀಟಿ, ಮತದಾರರು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಅಥವಾ ಒಂದೇ ವಿಧಾನಸಭಾ ಕ್ಷೇತ್ರದಲ್ಲಿರುವ ಭಾಗಕ್ಕೆ ಸ್ಥಳಾಂತರಕ್ಕಾಗಿ ನಮೂನೆ 8ರಲ್ಲಿ, ಹಕ್ಕು ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಹಕ್ಕು ಹಾಗೂ ಆಕ್ಷೇಪಣೆ ಅವಧಿಯಲ್ಲಿ ದಿನಾಂಕ : 12-11-2022, 20-11-2022, 03-12-2022 ಹಾಗೂ 04-12-2022 ರ ದಿನಗಳಂದು ವಿಶೇಷ ಕ್ಯಾಂಪೇನ್‍ಗಳನ್ನು ನಡೆಸಲಾಗುವುದು, ಸದರಿ ಕ್ಯಾಂಪೇನ್‍ಗಳಂದು ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಆಯಾ ಮತಗಟ್ಟೆಯ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೇ ಕಾರ್ಯವನ್ನು ಕೈಗೊಳ್ಳಲಿದ್ದು, ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಹಾಗೂ ಇತರೆ ಸೇವೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಳ್ಳಬಹುದು ಎಚಿದು ಅವರು ಹೇಳಿದರು.
ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಸೇರ್ಪಡೆಗಾಗಿ ಸ್ವೀಕೃತವಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ 9 ರಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಮತದಾರರ ಕುರಿತು ಸಲ್ಲಿಸಲಾಗುವ ಆಕ್ಷೇಪಣೆಗಳ ಪಟ್ಟಿಯನ್ನು ನಮೂನೆ 10 ರಲ್ಲಿ ಹಾಗೂ ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರಿನ ತಿದ್ದುಪಡಿಗಾಗಿ ಸಲ್ಲಿಸಲಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ 11 ರಲ್ಲಿ ಹಾಗೂ ಒಂದೇ ವಿಧಾನಸಭಾ ಮತಕ್ಷೇತ್ರ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ಸ್ಥಳಾಂತರಕ್ಕಾಗಿ ಸಲ್ಲಿಸಲಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ11ಎ ರಲ್ಲಿ ಹಾಗೂ ವಿಧಾನಸಭಾ ಮತಕ್ಷೇತ್ರದಿಂದ ಬೇರೊಂದು ವಿಧಾನಸಭಾ ಮತಕ್ಷೇತ್ರಕ್ಕೆ ಸ್ಥಳಾಂತರಕ್ಕಾಗಿ ಸಲ್ಲಿಸಲಾಗುವ ಅರ್ಜಿಗಳ ಪಟ್ಟಿಯನ್ನು ನಮೂನೆ 11 ಬಿ ರಲ್ಲಿ ಆಯಾ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.
ಈ ಮೊದಲು ವರ್ಷಕ್ಕೆ ಒಂದು ಬಾರಿ ಅಂದರೆ ಪ್ರತಿ ವರ್ಷ ಅರ್ಹತಾ ದಿನಾಂಕ ಜನೇವರಿ 1ರಂದು 18 ವರ್ಷ ಪೂರೈಸಿದ ಪ್ರಜೆಗಳು/ಸಾರ್ವಜನಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿತ್ತು. ಪ್ರಸ್ತುತ ಕಾಯ್ದೆಯಲ್ಲಿ ಜನವರಿ 01, ಏಪ್ರಿಲ್ 01, ಜುಲೈ 01, ಹಾಗೂ ಅಕ್ಟೋಬರ್ 01ನ್ನು 04 ಅರ್ಹತಾ ದಿನಾಂಕಗಳೆಂದು ನಿಗದಿಪಡಿಸಲಾಗಿದ್ದು, ಅರ್ಹ ಮತದಾರರು ತಮ್ಮ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ (ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಇತ್ಯಾದಿ) ಆನ್‍ಲೈನ್ ಪ್ಲ್ಯಾಟ್ ಫಾರ್ಮಗಳಾದ ವ್ಹಿ.ಎಚ್.ಎ, ಎನ್.ವಿ.ಎಸ್.ಪಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ಗರುಡ ಆ್ಯಪ್ ಮೂಲಕವೂ ಕೂಡಾ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದಾದರೂ ಗೊಂದಲ/ಸಮಸ್ಯೆಗಳಿದ್ದಲ್ಲಿ ಜಿಲ್ಲಾ ವ್ಯಾಪ್ತಿಯಿಂದ ಈ ಕಚೇರಿಯ ದೂರು ನಿರ್ವಹಣಾ ಕೇಂದ್ರದ ಟೋಲ್ ಪ್ರೀ ಸಂಖ್ಯೆ: 1950 ಗೆ, ಹೊರ ಜಿಲ್ಲೆಗಳಿಂದ ಜಿಲ್ಲಾ ದೂರು ನಿರ್ವಹಣಾ ಕೇಂದ್ರಕ್ಕೆ ಕರೆ ಮಾಡಲು ಟೋಲ್ ಪ್ರೀ ಸಂಖ್ಯೆ 08352-1950 ಕ್ಕೆ ಸಂರ್ಪಕಿಸಬಹುದಾಗಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ (ಹೊಸ ಸೇರ್ಪಡೆ,ತಿದ್ದುಪಡಿ, ಸ್ಥಳಾಂತರ ಇತ್ಯಾದಿ)ಆನ್‍ಲೈನ್ ಪ್ಲ್ಯಾಟ್ ಫಾರ್ಮಗಳಾದ ವ್ಹಿ.ಎಚ್.ಎ, ಎನ್.ವಿ.ಎಸ್.ಪಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಸಿ ಗರುಡ ಆ್ಯಪ್ ಮೂಲಕವೂ ಕೂಡಾ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಕ್ಕು ಮತ್ತು ಆಕ್ಷೇಪಣೆ ಸಮಯದಲ್ಲಿ ಸ್ವೀಕೃತವಾಗುವ ಎಲ್ಲ ಆಕ್ಷೇಪಣೆಗಳನ್ನು ದಿನಾಂಕ: 26-12-2022 ರೊಳಗಾಗಿ ಇತ್ಯರ್ಥಗೊಳಿಸಲಾಗುವುದು. ದಿನಾಂಕ:05-01-2023 ರಂದುವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಮತಗಟ್ಟೆಗಳ ವಿವರ : 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 241 ಮತಗಟ್ಟೆಗಳು, 27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 252 ಮತಗಟ್ಟೆಗಳು, 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಈ ಮೊದಲು 233 ಮತಗಟ್ಟೆಗಳಿದ್ದು, ಇದರಲ್ಲಿ 1 ಮತಗಟ್ಟೆಯನ್ನು ವಿಲೀನಗೊಳಿಸಲಾಗಿದ್ದು ಅಂತಿಮವಾಗಿ 232 ಮತಗಟ್ಟೆಗಳು ಅಸ್ವಿತ್ವದಲ್ಲಿವೆ ಎಂದು ಹೇಳಿದರು.
29-ಬಬಲೇಶ್ವರ ಮತಕ್ಷೇತ್ರದಲ್ಲಿ ಈ ಮೊದಲು 253 ಮತಗಟ್ಟೆಗಳಿದ್ದು, 10 ಮತಗಟ್ಟೆಗಳನ್ನು ವಿಲೀನಗೊಳಿಸಿದ್ದು, ಅಂತಿಮವಾಗಿ 243 ಮತಗಟ್ಟೆಗಳು ಅಸ್ತಿತ್ವದಲ್ಲಿವೆ. 30-ಬಿಜಾಪುರ ನಗರ ಮತಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದವು, ಇದರಲ್ಲಿ 4 ವಿಲೀನಗೊಳಿಸಿದ್ದು, ಅಂತಿಮವಾಗಿ 269 ಮತಗಟ್ಟೆಗಳು ಅಸ್ತಿತ್ವದಲ್ಲಿವೆ ಎಂದು ಹೇಳಿದರು.
31-ನಾಗಠಾಣ ಮತಕ್ಷೇತ್ರದಲ್ಲಿ ಈ ಮೊದಲಿದ್ದ ಮತಗಟ್ಟೆ ಸಂಖ್ಯೆ 305ರಲ್ಲಿ 9 ಮತಗಟ್ಟೆಗಳನ್ನು ವಿಲೀನ ಮಾಡಲಾಗಿದ್ದು, ಅಂತಿಮವಾಗಿ 296 ಮತಗಟ್ಟೆಗಳು ಅಸ್ತಿತ್ವದಲ್ಲಿವೆ. 32-ಇಂಡಿ ಮತಕ್ಷೇತ್ರದಲ್ಲಿ ಈ ಮೊದಲಿದ್ದ 274 ಮತಗಟ್ಟೆಗಳಲ್ಲಿ 6 ಮತಗಟ್ಟೆಗಳನ್ನು ವಿಲೀನಗೊಳಿಸಿದ್ದು, ಅಂತಿಮವಾಗಿ 296 ಮತಗಟ್ಟೆಗಳು ಅಸ್ವಿತ್ವದಲ್ಲಿವೆ ಎಂದು ಹೇಳಿದರು.
32-ಇಂಡಿ ಮತಕ್ಷೇತ್ರದಲ್ಲಿ ಈ ಮೊದಲಿದ್ದ 274 ಮತಗಟ್ಟೆಗಳಲ್ಲಿ 6 ಮತಗಟ್ಟೆಗಳನ್ನುವಿಲೀನಗೊಳಿಸಿದ್ದು, 268 ಮತಗಟ್ಟೆಗಳು ಅಂತಿಮವಾಗಿ ಅಸ್ವಿತ್ವದಲ್ಲಿವೆ ಹಾಗೂ 33-ಸಿಂದಗಿ ಮತಕ್ಷೇತ್ರದಲ್ಲಿ 271 ಮತಗಟ್ಟೆಗಳು ಅಸ್ವಿತ್ವದಲ್ಲಿದ್ದು, ಒಟ್ಟಾರೆ 2072 ಅಂತಿಮವಾಗಿ ಅಸ್ವಿತ್ವದಲ್ಲಿರುವ ಮತಗಟ್ಟೆಗಳಾಗಿವೆ ಎಂದು ಅವರು ಹೇಳಿದರು.
ಮತದಾರರ ವಿವರ : ಕರಡು ಮತದಾರರ ಪಟ್ಟಿಯಲ್ಲಿರುವಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಾದ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 2,05,644 ಮತದಾರರಿದ್ದು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಒಟ್ಟು 2,09,960, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಒಟ್ಟು 1,99,582, ಬಬಲೇಶ್ವರ ಮತಕ್ಷೇತ್ರದಲ್ಲಿ 2,08,415, ಬಿಜಾಪುರ ನಗರ ಮತಕ್ಷೇತ್ರದಲ್ಲಿ 2,57,245, ನಾಗಠಾಣ ಮತಕ್ಷೇತ್ರದಲ್ಲಿ 2,57,177, ಇಂಡಿ ಮತಕ್ಷೇತ್ರದಲ್ಲಿ 2,31,745 ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 2,28,626 ಮತದಾರರಿದ್ದು, ಜಿಲ್ಲೆಯ 8 ಮತಕ್ಷೇತ್ರಗಳಲ್ಲಿ 9,19,894 ಗಂಡು ಹಾಗೂ 8,78,264 ಹೆಣ್ಣು ಮತ್ತು 236ಇತರೆ ಸೇರಿದಂತೆ ಒಟ್ಟು 17,98,394 ಮತದಾರರಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಉಪಸ್ಥಿತರಿದ್ದರು.
ರಾಜಕೀಯ ಪ್ರತಿನಿಧಿಗಳೊಂದಿಗೆ ಸಭೆ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ವಿವಿಧ ರಾಜಕೀಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಕರಡು ಮತದಾರರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದ್ದು, ಪ್ರಕಟಿತ ಮತದಾರರ ಪಟ್ಟಿಯಲ್ಲಿ ತಿದ್ದುಪಡಿಯಿದ್ದಲ್ಲಿ,ಹೊಸ ಮತದಾರರ ಸೇರ್ಪಡೆ ಸೇರಿದಂತೆ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವುದರ ಮೂಲಕ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಶರಣು ಕುಂಬಾರ, ಎಂ.ಕೆ.ಬಾಗಾಯತ್, ಎಂ.ಎಂ.ಮೋಮಿನ, ಚನ್ನಬಸಪ್ಪ ನಂದರಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.