ಮತದಾರರೂ ಕಡ್ಡಾಯವಾಗಿ, ಮತದಾನ ಮಾಡಿ: ಇಓ ಶಿವಲೀಲಾ

ಹುಮನಾಬಾದ್:ಏ.10: ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹುಡಗಿ ಗ್ರಾಮದ ಪ್ರತಿಯೊಬ್ಬರು ಮತದಾರರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಲೀಲಾ ಹೇಳಿದರು.

ತಾಲ್ಲೂಕಿನ ಹುಡುಗಿ ಗ್ರಾಮದಲ್ಲಿ ಜಿಲ್ಲಾಡಳಿತ, ಸ್ವೀಪ ಸಮಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯಿಂದ ಸೋಮವಾರ ನಡೆದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

18 ವರ್ಷ ಮೇಲ್ಪಟ್ಟವರು ಮತದಾನ ಮಾಡುವ ಹಕ್ಕನ್ನು ಪಡೆದುಕೊಂಡಿದ್ದು ಹಾಗೂ 18 ವರ್ಷ ತುಂಬಿದ ಪ್ರತಿಯೊಬ್ಬರು ಕೂಡ ಮತದಾನ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಮತದಾನವನ್ನು ಮಾಡಲು ಅವಕಾಶವಿದ್ದು ಇದರ ಒಂದು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಯಾವುದೇ ಆವೇಶಗಳಿಗೆ ಒಳಗಾಗದೆ ಮತದಾನವನ್ನು ಮಾಡುವುದರ ಜೊತೆಗೆ ತಮ್ಮ ಅಕ್ಕ ಪಕ್ಕದವರಿಗು ಕೂಡ ಮತದಾನದ ಅರಿವು ಮೂಡಿಸಿ ಅವರನ್ನು ಕೂಡ ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನವನ್ನು ಮಾಡಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ, ಐಇಸಿ ಸಂಯೋಜಕ ಉಮೇಶ ಮಲಗಿ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಸ್ವಾಮಿದಾಸ, ವಿಠಲ, ಡಿಇಓ ರವಿರಾಜ ಇದ್ದರು.