ಮತದಾರರು ನೊಂದಣಿ ಮಾಡಿಸಿಕೊಳ್ಳಲು ವಿಶೇಷ ಅಭಿಯಾನ

ಕಲಬುರುಗಿ: ನ. 18: ಕಲಬುರ್ಗಿ ತಾಲೂಕಿನ ಪಟ್ಟಣ ಗ್ರಾಮದ ಕಲಬುರಗಿ 44-ದಕ್ಷಿಣ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 14,15,16 ) ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರು ಕಲಬುರಗಿ, ಹಾಗೂ ತಹಸೀಲ್ದಾರರು ಕಲಬುರಗಿ ರವರು ಪಟ್ಟಣ ಹೋಬಳಿಯ ಪಟ್ಟಣ ಗ್ರಾಮ ಪಂಚಾಯತ್ ಆವರಣದಲ್ಲಿ ಇಂದು ಮತ್ತು ನಾಳೆ ಎರಡು ದಿನ ಚುನಾವಣೆ ವಿಶೇಷ ಅಭಿಯಾನ ಇರುವ ಪ್ರಯುಕ್ತ ನಮೂನೆ-6 ನಮೂನೆ-7 ಮತ್ತು ನಮೂನೆ-8 ರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ನಮೂನೆ-6 ನ್ನು ಭರ್ತಿ ಮಾಡಲು ಹಾಗೂ ನಮೂನೆ-7 ಸ್ಥಳಾಂತರ/ಮರಣ ಇತರೆ ಬಗ್ಗೆ ತಿಳಿಸಿದರು ಈ ವಿಶೇಷ ಅಭಿಯಾನ ನೊಂದಣಿ ಮತದಾರರು ಅವರಿಂದ ಸ್ವೀಕರಿಸಿ ಮತ್ತು ಇನ್ನು ಹೆಚ್ಚಿನ ಯುವ ಮತದಾರ ನೋಂದಣಿ ಮಾಡಿಸಲು ತಿಳಿಸಿ ಮತ್ತು ಗ್ರಾಮದ ಎಲ್ಲಾ ರೈತರಿಗೆ ಈ ಕೂಡಲೇ ಮಾಡಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರರು ಪಟ್ಟಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು/ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.