ಮತದಾರರು ಅರ್ಜಿಯಲ್ಲಿ ಎಲ್ಲ ಕಾಲಂಗಳನ್ನು ನಿಖರವಾಗಿ ಭರ್ತಿ ಮಾಡಿ

ವಿಜಯಪುರ, ಡಿ.4-ಜಿಲ್ಲೆಯ ಮತದಾರರು ಸಾರ್ವಜನಿಕ ಸೇವಾ ಕೇಂದ್ರಗಳಾದ ಸೇವಾ ಸಿಂಧು, ಗ್ರಾಮ ಒನ್ ಹಾಗೂ ಇತರೆ ಆನ್‍ಲೈನ್ ಸೇವಾ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸುವಾಗ ಅರ್ಜಿದಾರ ವಿವರಗಳನ್ನು, ಅವರ ಮೊಬೈಲ್ ಸಂಖ್ಯೆ ನಮೂದಿಸುವುದರಿಂದ ಹಾಗೂ ಅರ್ಜಿದಾರರ ಪೂರ್ಣ ಪ್ರಮಾಣದ ಮಾಹಿತಿ ಹಾಗೂ ಅವರ ಸ್ಪಷ್ಟವಾದ ಭಾವಚಿತ್ರವನ್ನು ಹಾಗೂ ಅಗತ್ಯ ದಾಖಲೆಗಳನ್ನು ನಮೂದಿಸಬೇಕು. ಅರ್ಜಿಯ ಎಲ್ಲಾ ಕಾಲಂಗಳನ್ನು ನಿಖರವಾಗಿ ಭರ್ತಿ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು, ತೆಗೆದು ಹಾಕಲು, ತಿದ್ದುಪಡಿ ಹಾಗೂ ಸ್ಥಳಾಂತರಕ್ಕಾಗಿ ಮತದಾರರು ಸಾರ್ವಜನಿಕ ಸೇವಾ ಕೇಂದ್ರಗಳಾದ ಸೇವಾ ಸಿಂಧು, ಗ್ರಾಮ ಒನ್ ಹಾಗೂ ಇತರೆ ಆನ್‍ಲೈನ್ ಸೇವಾ ಕೇಂದ್ರಗಳಲ್ಲಿ ವಿವಿಧ ಅರ್ಜಿಗಳು ಅಂದರೆ ನಮೂನೆ 6,7,8 ಹಾಗೂ 8ಎ ಗಳು ಸಲ್ಲಿಸುವಾಗ ಅರ್ಜಿದಾರ ವಿವರಗಳನ್ನು, ಅವರ ಮೊಬೈಲ್ ಸಂಖ್ಯೆ ಬದಲಾಗಿ ಸೇವಾ ಕೇಂದ್ರದ ಸಂಪರ್ಕ ಸಂಖ್ಯೆ ನಮೂದಿಸುವುದರಿಂದ ಹಾಗೂ ಅರ್ಜಿದಾರರ ಪೂರ್ಣ ಪ್ರಮಾಣದ ಮಾಹಿತಿಯನ್ನು ಅಂದರೆ ಅವರ ಮನೆ ಸಂಖ್ಯೆ ವಿಳಾಸ, ಇತ್ಯಾದಿಗಳನ್ನು ನಿಖರವಾಗಿ ನಮೂದಿಸದೇ ಇರುವುದರಿಂದ ಅರ್ಜಿದಾರರ ಅರ್ಜಿಗಳು ತಿರಸ್ಕøತವಾಗುತ್ತಿದ್ದು, ಇದರಿಂದ ಸ್ಥಳ ಪರಿಶೀಲನೆಗೆ ಅರ್ಜಿದಾರರು ಸಿಗದೇ ಇರುವುದರಿಂದ ಅವರುಗಳು ಅರ್ಹತೆಯಿದ್ದರೂ ಸಹ ಅರ್ಜಿಗಳ ತಿರಸ್ಕøತವಾಗುತ್ತಿರುವುದನ್ನು ಗಮನಿಸಲಾಗಿದೆ.
ಆದ್ದರಿಂದ ಸಾರ್ವಜನಿಕ ಸೇವಾ ಕೇಂದ್ರಗಳಾದ ಸೇವಾ ಸಿಂಧು, ಗ್ರಾಮ ಒನ್ ಹಾಗೂ ಇತರೆ ಆನ್‍ಲೈನ್ ಸೇವಾ ಕೇಂದ್ರಗಳಲ್ಲಿ ಅರ್ಜಿಗಳನ್ನು ಸಲ್ಲಿಸುವಾಗ ಅರ್ಜಿದಾರ ವಿವರಗಳನ್ನು, ಅವರ ಮೊಬೈಲ್ ಸಂಖ್ಯೆ ನಮೂದಿಸುವುದರಿಂದ ಹಾಗೂ ಅರ್ಜಿದಾರರ ಪೂರ್ಣ ಪ್ರಮಾಣದ ಮಾಹಿತಿ ಹಾಗೂ ಅವರ ಸ್ಪಷ್ಟವಾದ ಭಾವಚಿತ್ರವನ್ನು ಹಾಗೂ ಅಗತ್ಯ ದಾಖಲೆಗಳನ್ನು ನಮೂದಿಸಬೇಕು. ಅರ್ಜಿಯ ಎಲ್ಲಾ ಕಾಲಂಗಳನ್ನು ನಿಖರವಾಗಿ ಭರ್ತಿ ಮಾಡಬೇಕು.
ಸಾರ್ವಜನಿಕರೂ ಸಹ ಮತದಾರರ ಪಟ್ಟಿಯ ಕುರಿತು ಸಲ್ಲಿಸಲಾಗುವ ವಿವಿಧ ಅರ್ಜಿ ನಮೂನೆ 6,7,8 ಹಾಗೂ 8 ಎ ಗಳನ್ನು ಆನ್‍ಲೈನ್‍ನಲ್ಲಿ ಸೇವಾ ಕೇಂದ್ರಗಳ ಮುಖಾಂತರ ಸಲ್ಲಿಸುವಾಗ ತಮ್ಮ ಸಂಪೂರ್ಣ ಮಾಹಿತಿಯನ್ನು ತಮ್ಮ ಮೊಬೈಲ್ ಸಂಖ್ಯೆ, ಮೇಲ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.