ಮತದಾರರು ಅಭ್ಯರ್ಥಿಗಳ ಗುಲಾಮರಲ್ಲ:ಕೆ.ನಾರಾಯಣಗೌಡ

ಕೋಲಾರ.ಏ.೨೯:ಮತದಾನ ಮಾರಾಟದ ವಸ್ತುವಲ್ಲ ಮತದಾರರು ಆಭ್ಯರ್ಥಿಗಳ ಗುಲಾಮರಲ್ಲ ಶೇ.೧೦೦ ರಷ್ಟು ಮತದಾನ ಮಾಡುವ ಮುಖಾಂತರ ಪ್ರಮಾಣಿಕ ಅಭಿವೃದ್ದಿಯ ಅಭ್ಯರ್ಥಿಗೆ ಮತ ನೀಡುವಂತೆ ಕೆ.ಜಿ.ಎಫ್‌ನಲ್ಲಿ ಆಯೋಜಿಸಿದ್ದ ಮತ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮನವಿ ಮಾಡಿದರು.
ಕೆರೆ ಸ್ವರೂಪ ಹಾಳಾಗಿರುವ ವಟ್ರಕುಂಟೆ ಕೆರೆಯಲ್ಲಿ ಕರೆದಿದ್ದ ಮತ ಜಾಗೃತಿ ಕಾರ್ಯಕ್ರಮದಲ್ಲಿ ನಮ್ಮ ಮತ ಮಾರಾಟಕ್ಕಿಲ್ಲ ಹಳ್ಳಿ ಅಭಿವೃದ್ದಿ ನಿರುದ್ಯೋಗ ಆರೋಗ್ಯ ಶಿಕ್ಷಣಕ್ಕೆ ಆದ್ಯತೆ ನೀಡುವ ಅಭ್ಯರ್ಥಿಗೆ ನಮ್ಮ ಮತ ಭ್ರಷ್ಟಚಾರಕ್ಕೆ ನಮ್ಮ ಮತವಿಲ್ಲ ಶೇ.೧೦೦ ರಷ್ಟು ಮತದಾನ ಮಾಡುವ ಮುಖಾಂತರ ಜಿಲ್ಲೆಯ ಹೆಸರು ರಾಜ್ಯ ಮಟ್ಟದಲ್ಲಿ ಗುರುತಿಸಲು ಯುವ ಮತದಾರರು ಒಗ್ಗಟ್ಟು ಪ್ರದರ್ಶಿಸುವ ನಿರ್ದಾರ ಕೈಗೊಂಡರು.
ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ವ್ಯಕ್ತಿ ಆಗಿರುವುದು ಅತ್ಯಂತ ಮುಖ್ಯ ಅಂತಹವರ ಆಯ್ಕೆ ಪ್ರಜೆಗಳ ನಿರ್ದಾರವಾಗಬೇಕು ಈಗ ಅಂತಹ ಪರಿಸರವಿಲ್ಲ ಚುನಾವಣೆಯು ವ್ಯಾಪಾರವಾಗಿದೆ. ಒಳ್ಳೆಯವರೇ ಚುನಾವಣೆಗೆ ನಿಲ್ಲುತ್ತಾರೆಂದು ಭರವಸೆ ಇಲ್ಲ ಚುನಾವಣೆಗೆ ಸ್ಪರ್ದಿಸುವವರಲ್ಲಿ ಕಡಿಮೆ ಕೆಟ್ಟವರನ್ನು ಪ್ರಜೆಗಳು ಆರಿಸಬೆಕಾಗುತ್ತದೆ ಈಗ ನಿರಾಕರಣೆ ಇಲ್ಲ ಸ್ವೀಕಾರವೇ ಎಲ್ಲ ಆಗಿದೆ ಪ್ರಕೃತಿ ಸಂಪತ್ತು ಸರ್ಕಾರಿ ಆಸ್ತಿಗಳನ್ನು ಕಬಳಿಸುವ ಜನಪ್ರತಿನಿದಿಗಳ ವಿರುದ್ದ ಪ್ರಶ್ನೆ ಮಾಡುವ ತಾಕತ್ತು ಪ್ರಜೆಗಳಿಗೆ ಬರಬೇಕೆಂದು ದೈರ್ಯ ತುಂಬಿದರು.
ತಾಲ್ಲೂಕಾದ್ಯಕ್ಷ ರಾಮಸಾಗರ ವೇಣು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಕುರಿಗಳಲ್ಲ ಡಾ ಬಾಬಾ ಸಾಹೇಬ್ ಆಂಬೇಡ್ಕರ್ ರವರು ರಚನೆ ಮಾಡಿರುವ ಸಂವಿಧಾನದಲ್ಲಿ ಕಟ್ಟಕಡೆಯ ಪ್ರಜೆಗೂ ಮತದಾನದ ಹಕ್ಕು ನೀಡಿರುವುದನ್ನು ಸಮರ್ಪಕವಾಗಿ ಬಳಸಿಕೊಂಡು ೫ ವರ್ಷಕ್ಕೊಮ್ಮೆ ಮತ ಬಿಕ್ಷೆ ಬೇಡಲು ಬರುವ ಜನಪ್ರತಿನಿದಿಗಳಿಗೆ ಸಾರ್ವಜನಿಕವಾಗಿ ಅಭಿವೃದ್ದಿ ಬಗ್ಗೆ ದ್ವನಿ ಎತ್ತುವ ದೈರ್ಯ ಯುವಕರಲ್ಲಿ ಬರಬೇಕೆಂದು ಸಲಹೆ ನೀಡಿದರು.
೫೦೦ ರೂ ನೋಟಿಗೆ ೧೦೦ ರೂ ಸೀರೆಗೆ ೧೫೦ ರೂ ಎಣ್ಣೆಗೆ ನಮ್ಮ ಮತವನ್ನು ಮಾರಿಕೊಂಡು ಭ್ರಷ್ಟ ವ್ಯವಸ್ಥೆಯನ್ನು ಸೃಷ್ಠಿ ಮಾಡುವ ಮತದಾರರೇ ಎಚ್ಚರ ದಿನಕ್ಕೆ ೨೫ ಪೈಸೆ ನಿಮ್ಮ ಬೆಲೆಯೇ ಚುನಾವಣೆ ಮುಗಿದರೆ ಕೂಲಿ ಮಾಡದೆ ಬದುಕಿಲ್ಲ ಡೋನೇಷನ್ ಕಟ್ಟದೆ ಮಕ್ಕಳ ವಿದ್ಯಾಬ್ಯಾಸವಿಲ್ಲ ಲಂಚವಿಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಇಲ್ಲ ಇದನ್ನು ಅರಿತು ಕಡ್ಡಾಯ ಮತದಾನ ಮಾಡೋಣ ಪ್ರಜಾಪ್ರಭುತ್ವದ ಐದು ವರ್ಷದ ಓಡುವ ಕುದುರೆಯನ್ನು ಸೃಷ್ಟಿ ಮಾಡಿ ಲಗಾಮನ್ನು ಪ್ರಜೆಗಳಾದ ನಾವು ನಮ್ಮ ಕೈಯಲ್ಲಿ ಹಿಡಿದುಕೊಳ್ಳುವ ಮುಖಾಂತರ ಪ್ರತಿ ಹಳ್ಳಿಯಲ್ಲಿ ಮತ ಜಾಗೃತಿ ಮೂಡಿಸುವ ನಿರ್ದಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತ ಸಂಘದ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ರಾಮಸಾಗರ ಸುರೇಶ್‌ಬಾಬು, ಮಂಜುನಾಥ್, ಯಾರಂಘಟ್ಟ ಗೀರೀಶ್, ಕಿರಣ್, ಸಂದೀಪ್‌ಗೌಡ, ಪಾರಾಂಡಹಳ್ಳಿ ಮಂಜುನಾಥ್ ಮುಂತಾದವರಿದ್ದರು.