
ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.02: ಚುನಾವಣೆ ನೀತಿ ಸಂಹಿತೆ ಉಲ್ಲಂಘಸಿ ಮತದಾರರಿಗೆ ಹಣ ಹಂಚಲು ಹೊರಟಿದ್ದ ವ್ಯಕ್ತಿಯ ಮೇಲೆ ಫ್ಲಯೆಂಗ್ ಸ್ಕ್ಯಾಡ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕನಕಗಿರಿ ರಸ್ತೆಯಲ್ಲಿ ಕಾರ್ ನಲ್ಲಿ ಹೊರಟಿದ್ದ ಕೆ.ಆರ್.ಪಿ.ಪಿ ಗ್ರಾಮೀಣ ಘಟಕದ ಅಧ್ಯಕ್ಷ ದುರುಗಪ್ಪ ಆಗೋಲಿ ಹಾಗೂ ಕಾರ್ ಡ್ರೈವರ್ ನ್ನು ಪರೀಶಿಲಿಸಿದ ಫ್ಲೇಯಿಂಗ್ ಸ್ಕ್ಯಾಡ್ ಅಧಿಕಾರಿಗಳು, ಕಾರ್ ನಲ್ಲಿ ಕೆ.ಆರ್.ಪಿ.ಪಿ ಲೆಟರ್ ಪ್ಯಾಡ್ ಹಾಗೂ ಪಕ್ಷದ ಬ್ಯಾನರ್ ಸೇರಿದಂತೆ 5 ಲಕ್ಷ ನಗದು ಹಣ ಹಾಗೂ ಕಾರ್ ನ್ನು ವಶಪಡೆದುಕೊಂಡು ದೂರನ್ನು ದಾಖಲಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿ ನಗದು ಹಣ ಸಾಗಾಟ ಮಾಡಿದ ಹಿನ್ನಲೆ ಕಾರ್ ಚಾಲಕ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರ ವಿರುದ್ಧ ನಗರಠಾಣೆಯಲ್ಲಿ ದೂರು ದಾಖಲಾಗಿದೆ.
One attachment • Scanned by Gmail