ಮತದಾರರಿಗೆ ಬೆದರಿಕೆ ಕಾಗೆ ನೋಟಿಸ್

ಚಿಕ್ಕೋಡಿ, ಮೇ ೨- ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೃತಪಟ್ಟರೆ, ಬೇರೆ ಯಾರು ಪ್ರಧಾನಿಯಾಗುವುದಿಲ್ಲವೇ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಡದಿದ್ದರೆ ವಿದ್ಯುತ್ ಕಡಿತ ಮಾಡುವುದಾಗಿ ಬೆದರಿಕೆ ಹಾಕಿದ್ದ ಶಾಸಕ ಭರಮಗೌಡ (ರಾಜು), ಕಾಗೆ ಅವರಿಗೆ ಚಿಕ್ಕೋಡಿ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ಶಿಂಧೆ ನೀತಿ ಸಂಹಿತೆ ಉಲ್ಲಂಘನೆಯಡಿ ನೋಟಿಸ್ ನೀಡಿದ್ದಾರೆ.
೨೪ ಗಂಟೆಯೊಳಗೆ ಈ ಎರಡು ವಿದಾಸ್ಪದ ಹೇಳಿಕೆ ಉತ್ತರ ನೀಡಬೇಕು ಎಂದು ಕಾಗಾವಾಡ ವಿಧಾನಸಭಾ ಮತ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ರಾಹುಲ್ ಶಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜು ಕಾಗೆ ಅವರು ಪ್ರಧಾನಿ ನರೇಂದ್ರ ಮೋದಿಯವರು ಸತ್ತರೆ ಈ ದೇಶದಲ್ಲಿ ಮುಂದೆ ಯಾರು ಪ್ರಧಾನಿಯಾಗುವುದಿಲ್ಲವೇ ಏಕೆ? ಮೋದಿ….. ಮೋದಿ ….. ಎಂದು ಕೂಗುತ್ತೀರಿ ಎಂದು ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮತ ಬಾರದೆ ಇದ್ದರೆ ನಿಮ್ಮ ಊರಿನ ವಿದ್ಯುತ್ ಕಡಿತ ಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದರು.