
ಬೆಂಗಳೂರು,ಮೇ.೯- ರಾಜ್ಯ ವಿಧಾನಸಭೆ ಚುನಾವಣೆ ನೀತಿ ಸಮಿತಿ ಜಾರಿಯಾದ ನಂತರ ಇಲ್ಲಿಯ ತನಕ ಬರೋಬ್ಬರಿ ೩೭೫.೬೧ ಕೋಟಿ ರೂಪಾಯಿ ಮೊತ್ತದ ನಗದು, ಮಾದಕ ವಸ್ತು,ಮದ್ಯ ಸೇರಿದಂತೆ ಇನ್ನಿತರೆ ಬೆಲೆ ಬಾಳುವ ಬಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.
೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ೮೩.೯೩ ಕೋಟಿ ಮೌಲ್ಯದ ನಗದು ಹಾಗು ಮಾದಕ ವಸ್ತು ವಗಶಪಡಿಸಿಕೊಳ್ಳಲಾಗಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ೪.೫ ಪಟ್ಟು ನಗದು, ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ನೆನ್ನೆಯ ತನಕ ೧೪೭.೪೬ ಕೋಟಿ ರೂಪಾಯಿ ನಗದು, ೮೩.೬೬ ಕೋಟಿ ರೂಪಾಯಿ ಮೌಲ್ಯದ ೨೨,೨೭,೦೪೫ ಲೀಟರ್ ಮದ್ಯ, ೨೬,೬೭ ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದರ ಜೊತೆಗೆ ೯೬.೬೬ಕೋಟಿ ರೂಪಾಯಿ ಮೊತ್ತದ ಬೆಲೆಬಾಳುವ ವಸ್ತುಗಳು, ೨೪.೨೧ ಕೋಟಿ ಮೊತ್ತದ ಉಚಿತ ಕೊಡುಗೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ ೮೧ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಗದಿ ಮಾಡಿದ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವುದು ಚುನಾವಣಾ ವೀಕ್ಷಕರು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ನಡುವೆ ೨೮೮ ಕೋಟಿ ಆಸ್ತಿ ಪಾಸ್ತಿಯನ್ನು ಚುನಾವಣಾ ಅಯೋಗದ ಅಧಿಕಾರಿಗಳು ಹಾಗು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸವದತ್ತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೋಡಾನ್ ನಲ್ಲಿ ೧೦೦೦ ಹೊಲಿಗೆ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.