
ಬೀದರ್:ಮೇ.1: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಲು ಪತ್ರಿಕೆಗಳ ಪಾತ್ರ ಮಹತ್ತರ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ನಗರದ ಗುಂಪಾ ರಸ್ತೆಯಲ್ಲಿರುವ ಬಿಗ್ ಬಜಾರ್ ಸಪ್ನಾ ಮಲ್ಟಿಪ್ಲೆಕ್ಸ್ ಅವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಹಮ್ಮಿಕೊಂಡ “ಪತ್ರಕರ್ತರು-ಚುನಾವಣೆ ಸಾಮಾಜಿಕ ಜವಾಬ್ದಾರಿ” ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರುವ ಅವರು, ಪತ್ರಕರ್ತರು ಒಂದಾಗಿ ಸೇರಿರುವುದು ತುಂಬ ಸಂತೋಷ. ನಿಮ್ಮಲ್ಲಿ ಈಗ ಯಾವುದೇ ಭಿನ್ನಾಭಿಪ್ರಾಯ ಇಲ್ಲವೆಂದಾದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಭವನ ನಿರ್ವಹಣೆ ಜವಾಬ್ದಾರಿ ನೀಡಲು ಜಿಲ್ಲಾಡಳಿತ ಸಿದ್ದವಿದೆ ಎಂದರು.
ಚುನಾವಣೆ ಈ ಸಂದರ್ಭದಲ್ಲಿ ದೃಶ್ಯ ಮಾಧ್ಯಮಗಳು ಜಾಹಿರಾತು ಹಾಕಲು ಎಮ್.ಸಿ.
ಎಮ್.ಸಿ ಸಮಿತಿಯ ಅನುಮತಿ ಕಡ್ಡಾಯ. ಆದರೆ ಮುದ್ರಣ ಮಾಧ್ಯಮಗಳಿಗೆ ಅನುಮತಿ ಅಗತ್ಯವಿಲ್ಲ. 48 ಗಂಟೆಗಳ ಚುನಾವಣೆ ಮುಂಚಿತವಾಗಿ ಮುದ್ರಣ ಮಾಧ್ಯಮಗಳು ಸಹ ಜಾಹೀರಾತು ಹಾಕಬೇಕಾದರೆ ಎಮ್.ಸಿ.ಎಮ್.ಸಿ ಸಮಿತಿಯ ಅನುಮತಿ ಕಡ್ಡಾಯವಾಗಿರುತ್ತದೆ. ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪೇಡ್ ಸುದ್ದಿಗಳು ಹಾಕುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿರುತ್ತದೆ. ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಯಾವುದೆ ಅಂತಹ ಪೇಡ್ ಸುದ್ದಿಗಳು ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಲ್.ಇ.ಡಿ ಹಾಗೂ ಆಟೊ ಮೂಲಕ ಪ್ರಚಾರಕ್ಕೆ ಚುನಾವಣಾ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿರುತ್ತದೆ. ಪತ್ರಿಕೆಗಳಲ್ಲಿ ಕರಪತ್ರಗಳು ಹಂಚಲು ಯಾವುದೆ ಅನುಮತಿ ಅಗತ್ಯವಿಲ್ಲ.ಆದರೆ ಅದರಲ್ಲಿ ತಪ್ಪಿದ್ದರೆ ಸಂಬಂದಪಟ್ಟ ಉಮೆದುವಾರರ ವಿರೂದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.
ಜಿಲ್ಲಾ ಪೆÇೀಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಎಲ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಪತ್ರಕರ್ತರಾದ ನಾವುಗಳು ಸಮಾಜಕ್ಕೆ ಮಾದರಿಯಾಗಿ ಇರಬೇಕಾದರೆ ನಮ್ಮ ಸುದ್ದಿಗಳು ಸತ್ಯಕ್ಕೆ ಸನಿಹವಾಗಿರಬೇಕು. ಒಬ್ಬ ಉಮೇದುವಾರರ ಜೊತೆ ಪತ್ರಕರ್ತರು ಸಂದರ್ಶನ ಮಾಡಬೇಕಾದರೆ ಚುನಾವಣೆ ಅಧಿಕಾರಿಗಳ ಹಾಗೂ ಪೆÇಲೀಸ್ ರ ಅನುಮತಿ ಕಡ್ಡಾಯವಾಗಿರುತ್ತದೆ. ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ಜಿಲ್ಲೆಗೆ ಆಗಮಿಸಿದಾಗ ಅವರ ಪ್ರಚಾರಕ್ಕಾಗಿ ತೆರಳಲು ಇನ್ನು ಮುಂದೆ ಜಿಲ್ಲಾ ಪೆÇಲೀಸ್ ಇಲಾಖೆಯಿಂದ ಪಾಸ್ ಒದಗಿಸಲಾಗುವುದು. ಆದರೆ ವಾರ್ತಾ ಇಲಾಖೆಯ ಅನುಮತಿ ಪಡೆದ ಪತ್ರಕರ್ತರಿಗೆ ಮಾತ್ರ ಈ ಪಾಸುಗಳು ನೀಡಲಾಗುತ್ತದೆ ಎಂದರು.
ಈ ಹಿಂದೆ ಸುಡಾನ್ ದೇಶಕ್ಕೆ ತಾನು ತೆರಳಿ ಅಲ್ಲಿ ಒಂದು ವರ್ಷ ಸೇವೆಯಲ್ಲಿರುವಾಗ ಅಲ್ಲಿ ದೃಶ್ಯ ಮಾಧ್ಯಮಗಳು ಇರುವುದಿಲ್ಲ. ಕೇವಲ ಅಕ್ಷರ ಮಾಧ್ಯಮಗಳು ಮಾತ್ರ ಕಂಡು ಬಂದಿದ್ದು ಅಕ್ಷರ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಬೇಕಾದರೆ ಅಲ್ಲಿಯ ಸರಕಾರಿ ಅಧಿಕಾರಿಯೊಬ್ಬರು ಪ್ರತಿ ದಿವಸ ಸಂಜೆ ಬಂದು ಸುದ್ದಿಗಳನ್ನು ಪರಿಶೀಲಿಸಿದ ನಂತರ ಅವುಗಳನ್ನು ಪ್ರಕಟಿಸುವ ವ್ಯವಸ್ಥೆ ಅಲ್ಲಿದೆ. ಆದರೆ ಭಾರತದಲ್ಲಿ ಮಾತ್ರ ಎಲ್ಲ ಮಾಧ್ಯಮಗಳಿಗೆ ಮುಕ್ತ ಅವಕಾಶವಿರುವುದು ಸಂತಸದ ಸಂಗತಿ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ. ಎಂ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದೆ ಮತದಾನ ಪ್ರಮಾಣ ಶೇಕಡವಾರು ಕಡಿಮೆಯಾದ ಕಾರಣ ಈ ವರ್ಷದ ಮತದಾನ ಪ್ರಮಾಣ ಹೆಚ್ಚಳವಾಗಿಸಲು ‘ನಮ್ಮ ನಡೆ ಮತದಾನದ ಕಡೆಗೆ’ ಸೇರಿದಂತೆ ಅನೇಕ ಚಟುವಟಿಕೆಗಳನ್ನು, ಪಾರಂಪರಿಕ ಓಟಗಳನ್ನು ಹಾಗೂ ಬಿದ್ರಿ ಕಲೆಗಳನ್ನು ಪ್ರದರ್ಶಿಸಿ ಮತದಾರರನ್ನು ಮತಗಟ್ಟೆಗಳಿಗೆ ಮತದಾರರನ್ನು ಆಕರ್ಷಿಸುವ ಕಾರ್ಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮಾಡುತ್ತಿದೆ ಎಂದು ವಿವರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ ಸುರೇಶ್ ಮಾತನಾಡಿ, ಸಾಮಾಜಿಕ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು. ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿರುವುದು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳಿಂದ ಮಾತ್ರ. ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಭಾರ ಅಧ್ಯಕ್ಷರಾದ ಡಿ.ಕೆ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಕಾಲದಲ್ಲಿ ಪ್ರಾಣ ಕಳೆದುಕೊಂಡ 60ಕ್ಕೂ ಅಧಿಕ ಪತ್ರಕರ್ತರಿಗೆ 5,00,000 ವಿಶೇಷ ಪರಿಹಾರ ನಿಧಿ ಹಾಗೆ ಅನಾರೋಗ್ಯದಿಂದ ಬಳಲಿದ ನೂರಾರು ಪತ್ರಕರ್ತರ ಕುಟುಂಬಗಳಿಗೆ ತಲಾ ಮೂರು ಲಕ್ಷದ ವರೆಗೆ ಆರ್ಥಿಕ ನೆರವು ಒದಗಿಸುವ ಕಾರ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡು ರವರು ಮಾಡಿರುವುದು ಸ್ಮರಣೀಯ ಕಾರ್ಯ. ಜಿಲ್ಲೆಯಲ್ಲಿ ಈಗ ಪತ್ರಕರ್ತರಲ್ಲಿ ಯಾವುದೇ ಗೊಂದಲ ಇರದ ಕಾರಣ ಪತ್ರಿಕಾ ಭವನವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಹಸ್ತಾಂತರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅನೇಕ ಪತ್ರಕರ್ತರು ಸಂವಾದ ಗೋಷ್ಠಿಯಲ್ಲಿ ತೊಡಗಿ ತಮ್ಮ ಗೊಂದಲ ಬಗೆಹರಿಸಿಕೊಂಡರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಎಂ. ಪಿ ಮುದಾಳೆ ವಂದಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಬಾಬುವಾಲಿ, ಮಾಳಪ್ಪ ಅಡಸಾರೆ, ಗಂಧರ್ವ ಸೇನಾ, ಅಬ್ದುಲ್ ಅಲಿ, ಅಬ್ದುಲ್ ಖದೀರ್, ಚಂದ್ರಕಾಂತ ಮಸಾನಿ, ಅಪ್ಪಾರಾವ ಸೌದಿ, ಶಶಿಕಾಂತ ಬಂಬುಳಗಿ, ಓಂಕಾರ ಮಠಪತಿ, ಸಂಜುಕುಮಾರ ಬುಕ್ಕಾ, ಬಸವರಾಜ ಕಾಮಶೆಟ್ಟಿ, ಶ್ರೀನಿವಾಸ ಚೌದ್ರಿ, ದೀಪಕ ವಾಲಿ, ವಿರೂಪಾಕ್ಷ ಗಾದಗಿ, ನಾಗಶೆಟ್ಟಿ ಧರಂಪುರ, ಪೃಥ್ವಿರಾಜ್ ಎಸ್, ಚಂದ್ರಕಾಂತ ಪಾಟೀಲ್, ಸಂತೋಷ ಚೆಟ್ಟಿ, ರೇವಣಸಿದ್ದಯ್ಯ ಸ್ವಾಮಿ ಸೇರಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಇತರೆ ಪದಾಧಿಕಾರಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಎಲ್ಲ ತಾಲೂಕುಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಇತರೆ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಇತರೆ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.