
ಬೆಂಗಳೂರು, ಮೇ ೯- ರಾಜ್ಯ ವಿಧಾನಸಭಾ ಚುನಾವಣಗೆ ನಾಳೆ(ಮೇ.೧೦) ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗವು ನಗರದಲ್ಲಿ ಹಲವಾರು ಥೀಮ್ ಆಧಾರಿತ ಮತಗಟ್ಟೆಗಳನ್ನು ಸಿದ್ಧಪಡಿಸಿದೆ.
ಮತದಾರರಲ್ಲಿ ತಮ್ಮ ಹಕ್ಕು ಚಲಾಯಿಸಲು ಜಾಗೃತಿ
ಮೂಡಿಸಿದ ಚುನಾವಣಾ ಆಯೋಗ ಒಂದು ಹೆಜ್ಜೆ
ಮುಂದೆ ಹೋಗಿ ನಗರದ ೨೮ ವಿಧಾನಸಭಾ ಕ್ಷೇತ್ರಗಳಲ್ಲಿ ೨೬೪ ಥೀಮ್ ಆಧಾರಿತ ಬೂತ್‌ಗಳನ್ನು ರಚಿಸಿದೆ.
ಪಿಂಕ್ ಮತಗಟ್ಟೆಗಳು, ಯುವ ಮತಗಟ್ಟೆಗಳು ಮತ್ತು ಸಾಂಸ್ಕೃತಿಕ ಮತಗಟ್ಟೆಗಳು ಈ ವರ್ಷ ಸ್ಥಾಪಿಸಲಾದ ಕೆಲವು ಥೀಮ್ ಆಧಾರಿತ ಮತಗಟ್ಟೆಗಳಾಗಿವೆ.
ಮಹಿಳಾ ಮತದಾರರನ್ನು ಪ್ರೋತ್ಸಾಹಿಸಲು ಪಿಂಕ್ ಮತಗಟ್ಟೆ, ಯುವ ಮತದಾರರ ಪ್ರೋತ್ಸಾಹಿಸುವ ಯುವ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ ಹಾಗೂ ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿಯ ಮತಗಟ್ಟೆ, ಕ್ರೀಡಾ ಮತಗಟ್ಟೆ ಮಾದರಿಗಳಲ್ಲಿ ಮತಗಟ್ಟೆಗಳ ನಿರ್ಮಾಣ. ಬಿಬಿಎಂಪಿ ವ್ಯಾಪ್ತಿಯ ೨೮ ವಿಧಾನಸಭಾ ಕ್ಷೇತ್ರಗಳಿಗೆ ಮಸ್ಟರಿಂಗ್ ಪ್ರಕ್ರಿಯೇ ಶುರು ಮಾಡಿದ್ದು, ಜಿಲ್ಲಾ ಚುನಾವಣಾ ಆಯೋಗ ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಪಿ.ಆರ್.ಓ ಹಾಗೂ ಎ.ಪಿ.ಆರ್.ಓ ಮತ್ತು ಮೂವರು ಪಿ.ಓ ಸೇರಿ ೫ ಜನ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ.
ರಕ್ಷಣೆಯ ದೃಷ್ಟಿಯಿಂದ ನಗರದಲ್ಲಿ ೩೯ ಸಾವಿರ ಪೊಲೀಸ್ ಸಿಬ್ಬಂದಿ, ೪ ಸಾವಿರ ಹೋಮ್ ಗಾರ್ಡ್ಸ್ ಜೊತೆಗೆ ಪ್ಯಾರಾ ಮಿಲಿಟರಿ ಗಳನ್ನು ಮತದಾನ ಹಾಗೂ ಮತ ಏಣಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಥೀಮ್ ಆಧಾರಿತ ಮತಗಟ್ಟೆಗಳಲ್ಲಿ ಮತದಾನದ ಪ್ರಾಮುಖ್ಯತೆಯನ್ನು ಸಾರುವ ಸಂದೇಶ ನೀಡಲಾಗಿದೆ.ಮತದಾನ ನಮ್ಮ ಹಕ್ಕು. ಉತ್ತಮರನ್ನು, ಯೋಗ್ಯರನ್ನು ಆಯ್ಕೆ ಮಾಡಿ ಮತದಾನ ಮಾಡಿ.