ಮತದಾನ ಹೆಚ್ಚಳಕ್ಕೆ ಜಾಗೃತಿ ಜಾಥಾ

ಬಸವಕಲ್ಯಾಣ:ಏ.4: ಲೋಕಸಭಾ ಚುನಾವಣೆ 2024ರ ಅಂಗವಾಗಿ ಜಿಲ್ಲಾಡಳಿತ, ಪೊಲೀಸ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲ್ಲೂಕು ವಿವಿಧ ಇಲಾಖೆಯ ಸಹಯೋಗದಲ್ಲಿ ಇಂದು ಬೆಳಗ್ಗೆ ಮತನದಾನ ಹೆಚ್ಚಳ ಜಾಗೃತಿ ಜಾಥಾ ನಡೆಯಿತು. ನಗರದ ಕೋಟಿಯಿಂದ ರಥಮೈದಾನದ ಸಭಾ ಭವನದ ವರೆಗೆ ನಡೆದ ಜಾಥಾದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ ವರೀಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜಿ. ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಗೀರಿಶ್ ಬದೊಲೆ, ಸಹಾಯಕ ಆಯುಕ್ತರಾದ ಅನೀಲಕುಮಾರ ಡವಳಗಿ, ತಹಸೀಲ್ದಾರ ಶಿವನಗೌಡ ಬಿರಾದಾರ, ತಾ. ಪಂ. ಇಓ ರಮೇಶ ಸುಲೋಟಿ, ಡಾ. ಗೌತಮ ಅರಳಿ, ನಗರ ಸಭೆ ಆಯುಕ್ತ ರಾಜು ಡಿ. ಬಣಕರ, ಸಿಪಿಐ ಅಲಿಸಾಬ ಸೇರಿದಂತೆ ಅನೇಕರ ಭಾಗವಹಿಸಿದರು.
ನಂತರ ಜಿಲ್ಲಾಧಿಕಾರಿ ಮಾತನಾಡಿ ಪ್ರಸ್ತುತ ಲೋಕಸಭಾ ಚುನಾವಣೆಯ ಮತದಾನದಲ್ಲಿ ತಪ್ಪದೆ ಭಾಗವಹಿಸಬೇಕು. ಹೆಚ್ಚು ಮತನಾದನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಹಾಗೂ ಯುವ ಮತದಾರರು ಉತ್ಸಹಾದಿಂದ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಜಿಲ್ಲಾ ಪೊಲೀಸ ವರೀಷ್ಟಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಸಹ ಮಾತನಾಡಿ ಮತದಾರರು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೆ ನಿರ್ಭಯವಾಗಿ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿದಂತೆ ಆಯಾ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದ್ಧಿಗಳು ಪಾಲ್ಗೊಂಡಿದರು.