ಮತದಾನ ಸಂವಿದಾನ ಬದ್ದ ಹಕ್ಕು, ಅದನ್ನು ಸಂಭ್ರಮದಿಂದ ಚಲಾಯಿಸಿ

ರಾಯಚೂರು,ಏ.೧೯- ಮೇ.೭ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಮ್ಮ ಜವಾಬ್ದಾರಿಯುತ ಕರ್ತವ್ಯ ಎಂದು ತಪ್ಪದೇ ಮತದಾನದ ಚಲಾಯಿಸಿ. ಶತಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಪೂರೈಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ರಾಯಚೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ನರೇಗಾ ಕೂಲಿಕಾರರಿಗೆ ತಿಳಿಸಿದರು.
ನಿನ್ನೆ ಬಿಚ್ಚಾಲಿ ಗ್ರಾಮ ಪಂಚಾಯತಿಯ ಬಿ.ಯದ್ಲಾಪೂರು ನಾಲಾ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ, ತಾಲೂಕ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾನದ ಮಹತ್ವದ ಕುರಿತು ಮತದಾರರ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
೧೮ ವ? ತುಂಬಿದ ಎಲ್ಲಾ ವಯಸ್ಕ ಪ್ರೌಡ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಇಂತಹ ಅತ್ಯುತ್ತಮ ವ್ಯವಸ್ಥೆಯಲ್ಲಿ ಭಾರತಿಯ ಪ್ರಜೆಗಳಾದ ನಾವು ಪ್ರಭುದ್ಧತೆಯಿಂದ ಅಮೂಲ್ಯವಾದ ಮತವನ್ನು ಮೇ ೭ ರಂದು ಗ್ರಾಮದ ಎಲ್ಲಾರೂ ತಪ್ಪದೇ ಮತ ಚಲಾಯಿಸಿ, ಶತ ಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಯಶಸ್ವಿಯಾಗಿ ಪೂರೈಸೋಣ ಎಂದರು.
ಈ ಸಂದರ್ಭದಲ್ಲಿ ಪಿಡಿಒ ಮಾಳಮ್ಮ ಶಿವಂಗಿ, ಐಇಸಿ ಸಂಯೋಜಕ ಧನರಾಜ, ತಾಂತ್ರಿಕ ಸಹಾಯಕ ಇಂಜೀನಿಯರ್ ಗುಡದಪ್ಪ, ಸಿ.ಅರ್.ಪಿ ಶ್ರೀಧರ, ಕಾರ್ಯದರ್ಶಿ ನರಸಿಂಹ, ಗ್ರಾ.ಪಂ ಡಿಇಒ ಕೃಷ್ಣ, ಬಿ.ಎಪ್.ಟಿ ಇಮಾನವೇಲ್, ಜಿಕೆಎಮ್ ಮೀನಾಕ್ಷಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಮತ್ತು ನರೇಗಾ ಮೇಟ್ ಕೂಲಿಕಾರರು ಉಪಸ್ಥಿತರಿದ್ದರು.