ಮತದಾನ ರಾಷ್ಟ್ರೀಯ ಹಬ್ಬಕ್ಕಿಂತ ದೊಡ್ಡದು : ಜಿಲ್ಲಾಧಿಕಾರಿ ಸ್ನೇಹಲ್ ಆರ್

ಗುರುಮಠಕಲ್:ಮಾ.17: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಅಧಿಕಾರಿಗಳಿಗೆ ಯಾದಗಿರಿ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್ ಅವರು ಕಿಟ್ ವಿತರಣೆ ಮಾಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಯಾವರೀತಿ ಗಡಿಯಲ್ಲಿ ದೇಶವನ್ನು ಸುಭದ್ರವಾಗಿ ಕಾಯಲು ಸೈನಿಕರು ಇದ್ದಾರೋ ಹಾಗೆಯೆ ಚುನಾವಣೆಯ ಸಮಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಬೂತ್ ಲೆವೆಲ್ ಆಫೀಸರ್ ಅವರು ಅಷ್ಟೇ ಮುಖ್ಯ ಇವರು ಕೂಡ ಸೇನಾನಿಗಳು ಇದ್ದಂತೆ ಎಂದು ಹೇಳಿದರು.
ತಮ್ಮ ವ್ಯಾಪ್ತಿಯ ಯಲ್ಲಿ ಬರುವ ಪ್ರತಿ ಯೋಬ್ಬ ಮತದಾರರ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಮತ್ತು ಜನರಿಗೆ ಮತದಾನ ಬಗ್ಗೆ ಅರಿವು ಮೂಡಿಸುವಲ್ಲಿ ಮತಗಟ್ಟೆಯ ಅಧಿಕಾರಿಗಳ ಪಾತ್ರ ಬಹಳ ಮಹತ್ವದ್ದು ಎಂದು ಹೇಳಿದರು. ಎಂಬತ್ತು ವರ್ಷ ದಾಟಿದವರು ತಮ್ಮ ಅಮೂಲ್ಯ ವಾದ ಮತವನ್ನು ಮನೆಯಿಂದಲೇ ಮತದಾನ ಮಾಡಲು ಈಬಾರಿ ವೆವಸ್ಥೆ ಕಲ್ಪಿಸಲಾಗಿದ್ದು ಇದಕ್ಕೆ ಬಿಎಲ್‍ಓ ಅವರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಧಿಕಾರಿ ಯವರು ಹೇಳಿದರು. ಈ ವೇಳೆ ಸಹಾಯಕ ಚುನಾವಣಾಧಿಕಾರಿ ಮೊಹಮ್ಮದ್ ಮೋಸಿನ್. ಗ್ರೇಡ್- 2 ತಹಸೀಲ್ದಾರರು ನರಸಿಂಹ ಸ್ವಾಮಿ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೊಳ್ಳಿ. ಮುಖ್ಯಾಧಿಕಾರಿ ಭಾರತಿ ಎಸ್ ದಂಡೊತಿ. ಉಪತಹಸೀಲ್ದಾರರು ಏಜಾಜ್ ಉಲ್ ಹಕ್. ಸೇರಿದಂತೆ ಗುರುಮಠಕಲ್ ಮತಕ್ಷೇತ್ರದ. ಬಿ ಎಲ್ ಒ ಗಳು ಇದ್ದರು..