ಮತದಾನ ಯಂತ್ರ ಪ್ರಾತ್ಯಕ್ಷಿಕೆ


ಮುನವಳ್ಳಿ,ಎ.3: ಸಮೀಪದ ತೆಗ್ಗಿಹಾಳ, ಜಕಬಾಳ, ಕಿಟದಾಳ, ಅರಟಗಲ್, ಬಸರಗಿ, ಹಿರೂರ, ಹಳ್ಳೂರ, ಭಂಡಾರಹಳ್ಳಿ, ತರೆದಕೊಪ್ಪ ಗ್ರಾಮಗಳಲ್ಲಿ ಬೆಳಗಾವಿ ಲೋಕಸಭೆಯ ಉಪಚುನಾವಣೆ ನಿಮಿತ್ತ ಮತದಾನಕ್ಕೆ ಬಳಸುವ ವಿ.ವಿ.ಪ್ಯಾಟ್ ಮತ್ತು ಇ.ವ್ಹಿ.ಎಂ ಯಂತ್ರಗಳ ಕುರಿತು ಇತ್ತಿಚಿಕೆ ಪ್ರಾತ್ಯಕ್ಷಿಕೆ ನೀಡಲಾಯಿತು. ಸೆಕ್ಟರ್ ಆಫೀಸರ ವಿ.ಕೆ.ಮುದಿಗೌಡರ, ಮಾಸ್ಟರ್ ಟ್ರೇನರ ಚಿದಾನಂದ ಬಾರ್ಕಿ, ಬಿ.ಎಲ್.ಓಗಳು ಸಂಬಂಧಪಟ್ಟ ಗ್ರಾಮಗಳ ಗ್ರಾಮ ಪಂಚಾಯತಿ ಪಿ.ಡಿ.ಓ ಮತ್ತು ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದು ಅಣಕು ಮತದಾನದಲ್ಲಿ ಭಾಗವಹಿಸುವ ಜೊತೆಗೆ ತಮಗೆ ಇರುವ ಸಂದೇಹಗಳನ್ನು ಕೇಳಿ ಪರಿಹರಿಸಿಕೊಳ್ಳುವ ಮೂಲಕ ಎಲ್ಲರೂ ಕಡ್ಡಾಯವಾಗಿ ಕೂವಿಡ ನಿಯಮಗಳನ್ನು ಅನುಸರಿಸಿ ಮತ ಚಲಾಯಿಸುವ ಕುರಿತಂತೆ ಕರೆ ನೀಡಲಾಯಿತು.