ಮತದಾನ ಮಾಡುವುದು ಮರೆಯಬೇಡಿ ನಾಟಕದ ಮೂಲಕ ಜಾಗೃತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,20- ಜಿಲ್ಲಾಡಳಿತ ಮತದಾನದ ಪ್ರಮಾಣ ಹೆಚ್ಚಳಕ್ಕೆ ನಾನಾ ರೀತಿ ಕಸರತ್ತು ನಡೆಸುತ್ತಿದ್ದು. ಮತದಾನದ ಬಗ್ಗೆ  ರಂಗಭೂಮಿಯನ್ನು ಬಳಸಿಕೊಂಡು, ಜನರಿಗೆ ಮತದಾನ ಮರೆಯಬೇಡಿ ಎಂದು ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕು ದರೂರು  ಗ್ರಾಮದ  ಹಜರತ್ ಹೊನ್ನೂರ್ ಅಲಿ ತಾತನವರ ದರ್ಗದ ಆವರಣದಲ್ಲಿ ತಾತನವರರವರ 82 ನೇ ವರ್ಷದ ಉರುಸು ಅಂಗವಾಗಿ
ಬಿ.ಹಸನ್ ಸಾಬ್ ದಾದನವರಿಗೆ 37ನೇ ತುಲಾಭಾರ ಪ್ರಯುಕ್ತ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು ಮೊನ್ನೆಯ ದಿನ.
ಈ ಸಂದರ್ಭ ಬಳಸಿಕೊಂಡ ಜಿಲ್ಲಾಡಳಿತ, ಜಿಲ್ಲಾ ಸ್ವೀಪ ಸಮಿತಿಯು ಹಂದ್ಯಾಳಿನ ಮಹದೇವತಾತಾ ಕಲಾ ಸಂಘದಿಂದ ದನಕಾಯುವವರ ದೊಡ್ಡಾಟದ ಮೂಲಕ ಮತದಾನ ಜಾಗೃತಿ ಮೂಡಿಸಿತು.
ನಾಟಕ ಪ್ರದರ್ಶನಕ್ಕೂ ಮುನ್ನ ಭಾವೈಕ್ಯದ ವೇದಿಕೆಯಲ್ಲಿ ಸ್ಥಳೀಯ  ಕೊಟ್ಟೂರು ಸ್ವಾಮಿ ಸಂಗಮ ಬಸವೇಶ್ವರ ಮಠದ ಶ್ರೀಗಳು ಮಾತನಾಡಿ. ಮತದಾನ ಪವಿತ್ರವಾದುದು. ಅದು ಸಂವಿಧಾನ ನಮಗೆ ನೀಡಿರುವ ಹಕ್ಕು. ಪ್ರತಿಯೊಬ್ಬರು ಮೇ.10 ರಂದು ಮತಗಟ್ಟೆಗೆ ತೆರಳಿ ಸೂಕ್ತ ಅಭ್ಯರ್ಥಿಗೆ  ಮತಚಲಾಯಿಸ ಬೇಕು ಎಂದು ಹೇಳಿದರು. 
ದರ್ಗಾದ ಹಿರಿಯ ಬಿ.ಹಸನ್ ಸಾಬ್ ಇವರು 18 ವರ್ಷ ಮೇಲ್ಪಟ್ಟ, ಮತಪಟ್ಟಿಯಲ್ಲಿ ಹೆಸರಿರುವವರೆಲ್ಲ ಮತದಾನ ಮಾಡೋಣ ಪ್ರಜಾ ಪ್ರಭುತ್ವ ಉಳಿಸೋಣ ಎಂದರು.
ವೇದಿಕೆಯಲ್ಲಿ ದರೂರು ವೀರಭದ್ರಸ್ವಾಮಿಯ ದೇವಸ್ಥಾನದ ಪ್ರಧಾನ ಅರ್ಚಕ ವೀರೇಶಯ್ಯಸ್ವಾಮಿ,   ಭೀಮನೇನಿಪ್ರಸಾದ್,   ಮಹಾದೇವತಾತಕಲಾಸಂಘದ ಅಧ್ಯಕ್ಷ ಹಾಗು ರಂಗಕಲಾವಿದ ಪುರುಷೋತ್ತಮ ಹಂದ್ಯಾಳು, ಖಜಾನೆ ಇಲಾಖೆಯ ಅಧಿಕಾರಿ ಅಲ್ಲಾಭಕಾಷ್ ,ಸಾಯಿಬಣ್ಣ, ಶರ್ಮಾಸ್, ಟಿ.ಹೊನ್ನೂರುಸಾಬ್, ಬಾಬು ಮುಂತಾದವರು ಇದ್ದರು.
ನಂತರ ಜಡೇಶ್ ಎಮ್ಮಿಗನೂರು ಇವರಿಂದ ಮತದಾನ ಕುರಿತ  ಜಾಗೃತಿ ಮೂಡಿಸುವ ಜನಪದ ಗೀತೆಗಳ ಗಾಯನ,  ಕನ್ನಡ ಸಾಹಿತ್ಯ ಪರಿಷತ್ ಗ್ರಾಮಿಣ ಘಟಕದ ಅಧ್ಯಕ್ಷ ಎ.ಎರ್ರಿಸ್ವಾಮಿ ಅವರು  ಹಾಸ್ಯದ ಮೂಲಕ ಮತದಾನದ ಸಂದೇಶ ನೀಡಿದರು.
ಬಳಿಕಮಹಾದೇವತಾತ ಕಲಾ ಸಂಘದಿಂದ ದನಕಾಯೋರ ದೂಡ್ಡಾಟ ಹಾಸ್ಯ ನಾಟಕದಲ್ಲಿ ಮತದಾನದ ಮಹಾತ್ವ ಹಾಗು ನೀತಿ ನಿಯಮಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು
ದಿ.ಶಿವಶಂಕರ ನಾಯ್ಡು ರಚಿಸಿದ ನಾಟಕವನ್ನು ಪುರುಷೋತ್ತಮ ಹಂದ್ಯಾಳು ನಿರ್ದೇಶನ ಮಾಡಿದ ನಾಟಕದಲ್ಲಿ    ಊರಿನಗೌಡನಾಗಿ ಭೀಮನೇನಿಪ್ರಸಾದ್ ನಾಟಕದಲ್ಲಿ ಸಾರಥಿ, ಪುರುಷೋತ್ತಮಹಂದ್ಯಾಳು  ಗಣಪತಿ-ಚಂದ್ರಶೇಖರ ಅಚಾರ್,ದುರ್ಯೋಧನ-ಅಂಬರೀಷ್ ದುಶ್ಯಾಸನ- ಜಡೇಶ್ , ಕೃಷ್ಣ-ಎ.ಎರಿಸ್ವಾಮಿ ಶಿಕ್ಷಕರು , ಬೀಮ  ಲೇಪಾಕ್ಷಿಗೌಡ ,ನಕುಲ- ಲೈಟಿಂಗ ಹನುಮಂತ, ಸಹದೇವ ಹೊನ್ನೂರಸ್ವಾಮಿ , ಅಗಸನಾಗಿ ಕುಮಾರಗೌಡ, ದ್ರೌಪತಿಯಾಗಿ ಮೌನೇಶ್ ಕಲ್ಲಹಳ್ಳಿ ನಟಿಸಿದರು.
ಹಾರ್ಮೊನಿಯಂ ಸಾಥ್  ಸಣ್ಣಹೊನ್ನೂರಸ್ವಾಮಿ,ಡೊಲಕ್  ಸಾಥ್ ಗಾದಿಲಿಂಗಪ್ಪ ನೀಡಿದರು.