ಮತದಾನ ಮಾಡುವಂತೆ ಪಾಲಕ ಪೋಷಕರಿಗೆ ಪತ್ರ ಬರೆದ ಶಾಲೆಯ ಮಕ್ಕಳು

ವಿಜಯಪುರ: ಎ.11:ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ತಂದೆ ತಾಯಂದಿರು ಹಾಗೂ ಪ್ರೀತಿಯ ಅಜ್ಜಿ-ಅಜ್ಜಂದರಿಗೆ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಬುತ್ವ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಅಂಚೆ ಪತ್ರದ ಮೂಲಕ ಕೋರಿದ್ದಾರೆ.
ಬಬಲೇಶ್ವರ ತಾಲೂಕ ಸ್ವೀಪ್ ಸಮೀತಿ ಗ್ರಾಮ ಪಂಚಾಯತ ಗುಣದಾಳ ಇವರ ಸಹಯೋಗದೊಂದಿಗೆ ಕೆಂಗಲಗುತ್ತಿ ಗ್ರಾಮದಲ್ಲಿ ಅಂಚೇ ಚೀಟಿ ಮೂಲಕ ಮತದಾನದ ವಿಶೇಷ ಜಾಗೃತಿ ಕಾರ್ಯಕ್ರಮ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕೆಂಗಲಗುತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಬಾಗವಹಿಸಿ ಪತ್ರ ಬರೆಯುವ ಮೂಲಕ ಪಾಲಕರಿಗೆ ವಿನಂತಿಸಿಕೊಂಡಿದ್ದಾರೆ. ಈ ಅಭಿಯಾನದಲ್ಲಿ 130 ವಿದ್ಯಾರ್ಥಿಗಳು ಪತ್ರ ಬೆರೆದಿದ್ದು ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ಚುನಾವಣೆ ದಿನದಂದು ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಬುತ್ವವನ್ನು ಬಲಿಷ್ಠಗೊಳಿಸಿ, ಎಂದು ವಿನಂತಿಮಾಡಿ ಪತ್ರವನ್ನು ಪೋಷಕರಿಗೆ ರವಾನೆಮಾಡಿದ್ದಾರೆ.
ಈ ಅಬಿಯಾನದಲ್ಲಿ ಪಿಡಿಓ ಅಧಿಕಾರಿ ರವಿ ಮಾಸರೆಡ್ಡಿ ಬಿ.ಎಲ್.ಓ ಗಳಾದ ಎಚ್. ಕೆ. ಕಾತರಕಿ ಎರ್.ಬಿ. ಹುಕ್ಕೇರಿ ಶಾಂತಪ್ಪ ಇಂಡಿ ಸುಜಾತಾ ಕಲ್ಮಠ ರಮೇಶ ಉಪ್ಪಾರ ತುಳಜಪ್ಪ ಉಪ್ಪಾರ ಭಾಗವಹಿಸಿದ್ದರು.