
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.11: ಪಟ್ಟಣದ ಗಚ್ಚಿನ ಮಠ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತುಂಬು ಗರ್ಭಿಣಿ ಮತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ
ಕೊಟ್ಟೂರಿನ ಬಸವೇಶ್ವರ ನಗರದ ನಿವಾಸಿಯಾದ ಸೌಮ್ಯ ವಿಜಯ್ ಕುಮಾರ್ ಇವರು 8 ತಿಂಗಳ ಗರ್ಭಿಣಿ ಆಗಿದ್ದು ಮತಗಟ್ಟೆಗೆ ಬಂದು ತುಂಬ ಉತ್ಸಾಹದಿಂದ ಮತದಾನ ಮಾಡಿ ಅನೇಕರಿಗೆ ಮಾದರಿಯಾಗಿದ್ದಾರೆ.
ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಚುಣಾವಣೆ ಎಂಬುದು ಪ್ರಜಾ ಪ್ರಭುತ್ವದ ಹಬ್ಬ ಐದು ವರ್ಷಗಳಿಗೊಮ್ಮೆ ಸಿಗುವ ಈ ಹಕ್ಕನ್ನು ಯಾವುದೇ ಕಾರಣಕ್ಕು ಕಳೆದುಕೊಳ್ಳಬಾರದು ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು ಚುನಾವಣಾ ಆಯೋಗ ವೃದ್ದರಿಗೆ ಹಾಗೂ ಗರ್ಭಿಣಿಯರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದೆ ಆದ್ದರಿಂದ ಎಲ್ಲರು ಮತಗಟ್ಟೆಗೆ ಬಂದು ಮತದಾನ ಮಾಡಬೇಕೆಂದು ಮನವಿ ಮಾಡಿಕೊಂಡರು.