ಮತದಾನ ಮಹತ್ವದ್ದೆಂದು ಸಾರಿದ ಕವಿಗಳು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.11: ಕನ್ನಡ ಸಾಹಿತ್ಯ ಪರಿಷತ್ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕ ,ಜಿಲ್ಲಾಡಳಿತ ಜಿಲ್ಲಾ ಸ್ವೀಪ್ ಸಮಿತಿ  ಹಾಗೂ ಸನ್ಮಾರ್ಗ ಗೆಳೆಯರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಶರಭೇಶ್ವರ ಬಿ.ಇಡಿ ಕಾಲೇಜು, ಗುಗ್ಗರಹಟ್ಟಿಯಲ್ಲಿ ಇಂದು ಮತದಾನದ ಮಹತ್ವ ಸಾರುವ ಜಾಗೃತಿ ಅಭಿಯಾನ ಹಾಗೂ ಕವಿಗೋಷ್ಠಿಯನ್ನು ಮಹಾನಗರ ಪಾಲಿಕೆಯ ಆಯುಕ್ತ ಎಸ್. ಎನ್. ರುದ್ರೇಶ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಂವಿಧಾನದಡಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ, ಉತ್ತಮವಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದಾಗ, ಉತ್ತಮ ಸರ್ಕಾರ ರಚನೆಯಾಗಿ ಉತ್ತಮ ಶಾಸನಗಳು, ಕಾನೂನು ರಚನೆ ಮಾಡುತ್ತಾರೆ. ಲೋಹಿಯಾ, ಜಯಪ್ರಕಾಶ್ ನಾರಾಯಣ್ ಇವರು ಉತ್ತಮ ಸಾಮಾಜಿಕ ಹೋರಾಟಗಾರರಾಗಿದ್ದಾರೆ. ಅಂತಹವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿಗಳಿಗೆ ಮತನೀಡಬೇಕೆಂದು. ನಿಜವಾದ ಜನಶಕ್ತಿ ನಿಮ್ಮ ಮತದಲ್ಲಿದೆ.ಆದ್ದರಿಂದ ಯುವಕರು ಬದಲಾವಣೆ ಕಡೆ ಗಮನ ವಹಿಸಬೇಕು. ಜನರನ್ನು ಜಾಗೃತಿ ಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಅಧ್ಯಕ್ಷ ಡಾ.ನಿಷ್ಠಿರುದ್ರಪ್ಪ ವಹಿಸಿದ್ದರು.
ಯೋಜನಾ ನಿರ್ದೇಶಕ ಪಿ.ಪ್ರಮೋದ್, ಹೆಚ್. ಲಕ್ಷ್ಮಿಕಾಂತರೆಡ್ಡಿ, ರೇಣುಬಾಬು, ಮೆಹತಾಬ್, ಪುರುಷೋತ್ತಮ ಹಂದ್ಯಾಳು, ಹನುಮಂತಪ್ಪ, ಶಿವಾನಂದಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಭಾಗವಹಿಸಿದ ಕವಿಗಳು :ಡಾ.ಶ್ರೀನಿವಾಸ ಮೂರ್ತಿ, ಪಿ.ಆರ್. ವೆಂಕಟೇಶ್, ಅಬ್ದುಲ್ ಹೈ,ಅಜಯ ಬಣಕಾರ,ಎನ್.ಎಂ.ವಾಮದೇವಯ್ಯ,ಎಂ.ಎಲ್.ಮಂಗಳ,ಹೆಚ್.ಎನ್. ನಾಗರಾಜ್, ರವಿಚೇಳ್ಳಗುರ್ಕಿ, ಹೆಚ್. ಎಂ.ನೇತ್ರಾ, ರಾಜಪ್ಪ ಭಾಗವಹಿಸಿದ್ದರು.
ಗ್ರಾಮೀಣ ಘಟಕದ ಅಧ್ಯಕ್ಷ ಎ.ಎರ್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕಪ್ಪಗಲ್ಲು ಚಂದ್ರಶೇಖರ್ ಆಚಾರ್, ಎಸ್. ಸತ್ಯನಾರಾಯಣ, ಮಲ್ಲಿಕಾರ್ಜುನ, ಹುಸೇನ್ ಬಾಷ,ಟಿ.ಪ್ರಕಾಶ ನಿರ್ವಹಿಸಿದರು.ಜನಪದ ಜಡೇಶ ಎಮ್ಮಿಗನೂರು ಮತದಾನ ಜಾಗೃತಿ ಗೀತೆಗಳನ್ನು ಹಾಡಿದರು.