ಮತದಾನ ಮಹತ್ವ,ಕಡ್ಡಾಯದ ಬಗ್ಗೆ ಪಾಲಕರಿಗೆ ಪತ್ರ


ಹಗರಿಬೊಮ್ಮನಹಳ್ಳಿ:ಏ.05 ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ಪೂರ್ವ & ಮೆಟ್ರಿಕ್ ನಂತರದ ಬಾಲಕ,ಬಾಲಕಿಯರ ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳು ಚುನಾವಣಾ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ತಮ್ಮ ತಮ್ಮ ತಂದೆ ತಾಯಿ, ಪೋಷಕರಿಗೆ ಚುನಾವಣೆಯ ಮಹತ್ವ, ಕಡ್ಡಾಯ ಮತದಾನ ಮಾಡುವಂತೆ ಪತ್ರ ಬರಿಯುವ ಮೂಲಕ ಜಾಗೃತಿ ಮೂಡಿಸಿದರು.
ಚುನಾವಣೆ ಸಂದರ್ಭದಲ್ಲಿ ಯಾವುದೇ ಆಸೆ, ಆಕಾಂಕ್ಷೆಗಳಿಗೆ ಒಳಗಾಗದೇ, ನಿರ್ಭಯ, ನಿರ್ಭೀತಿಯಿಂದ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅರ್ಹ ವ್ಯಕ್ತಿಗೆ ಮತ ಚಲಾಯಿಸುವಂತೆ ಪತ್ರ ಮುಖೇನ ಅಭಿಯಾನ ಕೈಗೊಂಡು ಅಂಚೆ ಪತ್ರಗಳನ್ನು ಪೋಸ್ಟ್ ಮಾಡಿಸಲಾಯಿತು.
 . ನಿಲಯದಲ್ಲಿ ಒಟ್ಟು 1277 ವಿದ್ಯಾರ್ಥಿಗಳಿದ್ದು 647 ಹುಡುಗರು, 630 ಹುಡುಗಿಯರು ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿದ್ದು ವ್ಯಾಸಾಂಗ ಮಾಡುತ್ತಿದ್ದಾರೆ. ಈದಿನ ಒಟ್ಟು 515 ವಿದ್ಯಾರ್ಥಿಗಳು ಪತ್ರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ನಿಲಯ ಮೇಲ್ವಿಚಾರಕರು, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.