
ಮಾನ್ವಿ,ಫೆ.೨೫- ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನವನ್ನು ಮಾಡಲೇಬೇಕು ಇಲ್ಲವಾದಲ್ಲಿ ನಿಮ್ಮತನವನ್ನು ಕಳೆದುಕೊಂಡತೆ ಇದರಿಂದಾಗಿ ಪ್ರಜಾಪ್ರಭುತ್ವಕ್ಕೆ ದಕ್ಕೆಯಾಗಲಿದೆ ಎಂದು ತಾಲೂಕ ವೈದ್ಯಾಧಿಕಾರ ಚಂದ್ರಶೇಖರಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮತದಾನದ ಮಹತ್ವದ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತಾನಾಡಿದ ಅವರು ಮುಂಬರಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನದ ಮೂಲಕ ಅಭಿವೃದ್ಧಿಯ ಯೋಜನೆ, ಯೋಚನೆಯುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಸೂಕ್ತ ಅಭ್ಯರ್ಥಿಗೆ ಮತದಾನ ನೀಡುವುದರ ಮೂಲಕ ನಮ್ಮತನವನ್ನು ನಾವು ಉಳಿಸಿಕೊಂಡು ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದರು. ನಂತರ ಬಾಲಪ್ಪ ನಾಯಕ ಮಾತಾನಾಡಿ, ಯಾವುದೇ ಜಾತಿ ಧರ್ಮ ಪಂಗಡಗಳನ್ನು ಪರಿಗಣಿಸದೆ ಯಾರ ಒತ್ತಡಕ್ಕೂ ಒಳಗಾಗದೆ ಹಣ ಹೆಂಡಕ್ಕೆ ಮತವನ್ನು ಮಾರಾಟ ಮಾಡಿಕೊಳ್ಳದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರಲಿ ಎಂದು ನಂತರ ಮತದಾನದ ಪ್ರತಿಜ್ಞೆಯ ವಿಧಿಯನ್ನು ಭೋದಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಬಾಬು ಚಿನ್ನು, ರಾಜೇಶ್ವರಿ, ಗಿರೀಶ್, ಮರಿಲಿಂಗಣ್ಣ ನೀರಮಾನವಿ, ಸ್ಥಳೀಯರು, ಮಹಿಳೆಯರು ಸೇರಿದಂತೆ ಅನೇಕರು ಇದ್ದರು.