ಮತದಾನ ಬಹಿಷ್ಕಾರಕ್ಕೆ ಮುಂದಾದ ಕೃಷ್ಣಾನಗರ ಕ್ಯಾಂಪ್ ಜನತೆ 


  (ಸಂಜೆವಾಣಿ ಪ್ರತಿನಿಧಿಯಿಂದ)
 ಬಳ್ಳಾರಿ, ಏ.23:  ತಾಲೂಕಿನ‌ ಕೊಳಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷ್ಣನಗರ ಕ್ಯಾಂಪ್ ನ್ನು 2 ಎ ಅಡಿಯಲ್ಲಿ ಕಂದಾಯ ಗ್ರಾಮವನ್ನಾಗಿ ಮಾಡುವುದನ್ನು ಕೈ ಬಿಡಬೇಕು ಇಲ್ಲದಿದ್ದರೆ ಮತದಾನದ ಬಹಿಷ್ಕಾರ ಮಾಡುವುದಾಗಿ ಕ್ಯಾಂಪಿನ ಜನ ಇಂದು ಕ್ಯಾಂಪಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕ್ಯಾಂಪ್ ನ್ನು ಈಗಾಗಲೇ ಸರ್ವೆ ಕಾರ್ಯ ನಡೆಸಿ ವರದಿ ನೀಡಿದ್ದು, ಅದರಂತೆ ಗ್ರಾಮದಲ್ಲಿ ಅನೇಕ ಪಟ್ಟಾ ಜಮೀನುಗಳು ಸರ್ಕಾರ ಜಮೀನುಗಳಾಗಿ ಪರಿವರ್ತನೆಗೊಂಡಿವೆ. ಪಟ್ಟಾದಾರರು ರೈತಾಪಿ ವರ್ಗದವರಾಗಿರುತ್ತಾರೆ.
ಪಟ್ಟಾದಾರರುವ ಕನಿಷ್ಟ ವಿಸ್ತೀರ್ಣ: 0-10 ಸೆಂಟ್ಸ್ ನಿಂದ ಎಕರೆ ಗಟ್ಟಲೆ ಹಿಡುವಳಿ ಹೊಂದಿದ್ದು, ಸದರಿ ಕೃಷಿ ಜಮೀನುಗಳಲ್ಲಿ ವಾಸದ ಮನೆಗಳನ್ನು ನಿರ್ಮಿಸಿಕೊಂಡಿರುತ್ತೇವೆ. ನಾವೆಲ್ಲರೂ ರೈತಾಪಿ ವರ್ಗದವರಾಗಿದ್ದು, ಈ ಹಿಂದೆ ಮೂಲ ಪಟ್ಟಾದಾರರಿಂದ ಕೆಲವರು ನೊಂದಾಯಿತ ದಸ್ತಾವೇಜಿನಂತೆ ಕ್ರಯಕ್ಕೆ ಪಡದವರಿರುತ್ತಾರೆ. ಇನ್ನೂ ಕೆಲವರು ಮೂಲ ಪಟ್ಟಾದಾರರಿಂದ ನೊಂದಾಯಿತವಲ್ಲದ ಒಪ್ಪಿಗೆ ಪತ್ರದ ಮೂಲಕ ಹಣ ನೀಡಿ ಖರೀದಿಸಿರುತ್ತಾರೆ. ಆದರೆ ಈಗ ಕಂದಾಯ ಗ್ರಾಮ ಮಾಡುವಾಗ ನಾವು ಖರೀದಿಸಿರುವ ಸಂಪೂರ್ಣ ವಿಸ್ತೀರ್ಣದ ಜಮೀನು ಹೊರತಾಗಿ ಕೇವಲ ನಮ್ಮ ಸ್ವಂತ ಜಾಗದ ಒಂದು ಭಾಗದಲ್ಲಿ ನಿರ್ಮಿಸಿಕೊಂಡಿರುವ ವಾಸದ ಮನೆಗೆ ಮಾತ್ರ ಹಕ್ಕು ವತ್ರ ನೀಡುತ್ತಿರುವುದಾಗಿ ತಿಳಿದುಬಂದಿದ್ದು, ಉಳಿದಂತೆ ವಶುಸಂಗೋಪನೆಗೆ ಮತ್ತು ಇತರೇ ಕೃಷಿ ಚಟುವಟಿಕೆಗಳಾಗಿ ನಾವು  ಉಳಿಸಿಕೊಂಡಿರುವ ಮನೆ ಮುಂದಿನ ಜಮೀನನ್ನು ಸರ್ಕಾರದ ಹೆಸರಿಗೆ ಖಾತ ಮಾಡುತ್ತಿರುವುದರಿಂದ ನಮಗೆ ಇದರಿಂದಾಗಿ ಅತೀವ ಅನ್ಯಾಯವಾಗುತ್ತಿದೆ.
ಪ್ರಸ್ತುತ ನಮ್ಮ ಗ್ರಾಮದಲ್ಲಿ ಅನೇಕರು ಅವಿಭಕ್ತ ಕುಟುಂಬದವರಿದ್ದು, ಮುಂದೆ ನಮ್ಮದೇ ಖಾಲಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವ ಉದ್ದೇಶ ಹೊಂದಿರುತ್ತೇವೆ. ಅದರೆ ತಾವುಗಳು ಕಂದಾಯ ಗ್ರಾಮದ ನೆಪದಲ್ಲಿ ನಮ್ಮ ಸ್ವಂತ ಹಣದಿಂದ ಖರೀದಿಸಿದ ಜಮೀನನ್ನೇ ಸರ್ಕಾರ ತನ್ನದಾಗಿಸಿಕೊಳ್ಳುತ್ತಿದೆ. ಇದು ಸರಿಯಲ್ಲ ನಮ್ಮ ಜಮೀನು ನಮಗೆ ಬಿಟ್ಡು ಉಳಿದಿದ್ದನ್ನು ಪಡೆಯಲಿ ಎಂದೂ ಮನವಿ ಮಾಡಿತ್ತು.
ಅದರೇ ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಅದಕ್ಕಾಗಿವೀ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಡಲಿದೆಂದು ಕ್ಯಾಂಪಿನ ಜನ ಇಂದು ಪ್ರತಿಭಟನೆ ನಡೆಸಿದ್ದಾರೆ.