ಮತದಾನ ಬಹಿಷ್ಕರಿಸದಂತೆ ಅಧಿಕಾರಿಗಳ ಮನವಿ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.28: ನೀರಿಗಾಗಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ತಾಲೂಕಿನ ವಿಠಲಾಪುರ ಗ್ರಾಮಕ್ಕೆ ತಾಲೂಕಾಡಳಿತಾಧಿಕಾರಿ ಮಂಜುನಾಥ ಅವರ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಹರಿತು ಪರಿಹಾರಿಸುವ ಭರವಸೆ ನೀಡಿ ಮತದಾನ ಮಾಡುವಂತೆ ಮನವೋಲಿಸಿದರು.
ಜನ ಮತ್ತು ಜಾನುವಾರಗಳಿಗೆ ಕುಡಿಯುವ ನೀರನ್ನು ಒದಗಿಸುವಂತೆ ವಿಠಲಾಪುರ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಚಿಕ್ಕಜಂತಕಲ್ ತುಂಗಾಭದ್ರ ನದಿ ನೀರನ್ನು ಪೈಪ್ ಮೂಲಕ ಬಂದಿರುವ ಮಾರ್ಗವನ್ನು ಕೆಲವರು ಹಾಳು ಮಾಡಿದ್ದರು. ಇದರಿಂದ ಗ್ರಾಮದಲ್ಲಿ ನೀರಿನ ಅಭಾವ ಉಂಟಾಗಿತ್ತು. ಗ್ರಾಮಸ್ಥರು ಹಲವು ಭಾರಿ ಅಧಿಕಾರಿಗಳಿಗೂ ಸೂಚಿಸದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ಗ್ರಾಮಸ್ಥರು ಈ ಭಾರಿ ಮತದಾನದ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದರು. ವಿಷಯ ತಿಳಿದು ಗ್ರಾಮಕ್ಕೆ ತಹಶೀಲ್ದಾರ್ ಮಂಜುನಾಥ ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿತು. ಈ ಎಲ್ಲಾ ಸಮಸ್ಯೆ ಎರಡು ದಿನದಲ್ಲಿ ಪರಿಹಾರಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿ ಯಾವುದೇ ಕಾರಣಕ್ಕೂ ಮತದಾನ ಬಹಿಷ್ಕಾರ ಮಾಡದಂತೆ ಮನವಿ ಮಾಡಿದರು. ಇದಕ್ಕೆ ಗ್ರಾಮಸ್ಥರು ಒಪ್ಪಿಕೊಂಡು ಮತದಾನದಿಂದ ದೂರ ಉಳಿಯುವುದಿಲ್ಲ. ಖಂಡಿತವಾಗಿ ಮತದಾನ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಂತರ  ತಹಶಿಲ್ದಾರ್ ಮಾತನಾಡಿ, ಕುಡಿಯುವ ನೀರಿನ ಯೋಜನೆ ಮಾಡಲಾಗಿತ್ತು. ಕೆಲವರು ಪೈಪ್ ಲೈನ್ ಹಾಳು ಮಾಡಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳ ಹಾಗೂ ಇಂಜಿನಿಯರ್ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಂಡು ಗ್ರಾಮಕ್ಕೆ ನೀರಿನ ಸೌಲಭ್ಯ ನೀಡಲಾಗುವದು. ಪ್ರಜಾಪ್ರಬುತ್ವದಲ್ಲಿ ಮತದಾನದಿಂದ ದೂರ ಉಳಿಯಬಾರದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು. ಈ ವೇಳೆ ತಾ.ಪಂ. ಇಒ ಮಹಾಂತಗೌಡ ಪಾಟೀಲ್, ಎಇಇ ಸತೀಶ್, ಗ್ರಾಮಸ್ಥರಾದ ಯಮನೂರಪ್ಪ, ರಾಮಣ್ಣ, ಪಿಡಿಒ ಸೇರಿದಂತೆ ಅನೇಕರು ಇದ್ದರು.