ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲರ ಸಹಕಾರ ಅಗತ್ಯ : ಇಓ ಮಾಣಿಕರಾವ ಪಾಟೀಲ್

ಬೀದರ್: ಎ.24:ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆನಿಸಯ್ಯಾ ಎನ್ನುವ ಮೂಲಕ ಸರ್ವರಿಗೂ ಸಮಾನತೆ ಸಾರಿದ ಶ್ರೇಷ್ಟ ಸಮಾಜ ಸುಧಾರಕ ಬಸವಣ್ಣನವರು ಎಂದು ಬೀದರ ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ ರಾವ ಪಾಟೀಲ ಹೇಳಿದರು.

ಅವರು ರವಿವಾರ ಬೀದರನ ‘ ನೂತನವಾಗಿ ನವಿಕರಣಗೊಳಿಸಲ್ಪಟ್ಟ ಮರಕಲ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ಡ ಬಸವಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮ ಹಾಗೂ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಸವಣ್ಣನವರು 12 ನೇ ಶತಮಾನದಲ್ಲಿದ್ದ ಜಾತಿ ಪದ್ದತಿ, ಲಿಂಗ ತಾರತಮ್ಯ, ಅಸಮಾನತೆ, ಮುಡನಂಬಿಕೆಗಳನ್ನು ವಿರೊಧಿಸಿದ್ದರು. ಮತ್ತು ಎಲ್ಲಾ ಧರ್ಮದವರು ತಮ್ಮ ಅನುಭವ ಮಟ್ಟಪದಲ್ಲಿ ಸ್ಥಾನ ನಿಡುವ ಮೂಲಕ ಸಮಾನತೆ ಸಾರಿದರು ಎಂದರು..
ಮೇ 10 ರಂದು ಸಾರ್ವತ್ರಿಕ ವಿಧಾನ ಚುನಾವಣೆ 2023ಕ್ಕೆ ಮತದಾನ ನಡೆಯಲಿದ್ದು ಎಲ್ಲರೂ ಮತದಾನ ಮಾಡಬೇಕು ಎಂದ ಅವರು ಕಳೆದ ಬಾರಿ ಬೀದರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಸಾಕಷ್ಟು ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪಂಚಾಯತ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಸಂಜುಕುಮಾರ ಮಾತನಾಡಿ, ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದಾರೆ ನಾವು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೇಯಬೇಕು ಎಂದು ಹೇಳಿದರು.

ಬೀದರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಆದರೆ ಮತದಾರರ ಸಹಕಾರ ಇದ್ದರೆ ಮಾತ್ರ ಮತದಾನ ಪ್ರಮಾಣ ಹೆಚ್ಚಿಸಲು ಸಾಧ್ಯ ಆದರಿಂದ ಎಲ್ಲರೂ ಮತದಾನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಪಿಡಿಓ ಉಮೇಶ ಜಾಬಾ, ಕಾರ್ಯದರ್ಶಿ ಸಂಗಪ್ಪಾ,ಗ್ರಾಮದ ಮುಖಂಡರಾದ
ವೀರಭದ್ರಪ್ಪಾ ಬುಯ್ಯಾ, ಬಸವರಾಜ ಬುಯ್ಯಾ, ಶಿವರಾಜ ಮಾಸ್ಟರ, ಗಣಪತರಾವ ಮಾಸ್ಟರ, ಶಿವರಾಜ ಪಾಟೀಲ್,ಸತ್ಯಜೀತ್ ನೀಡೋದಾಕರ್,
ಸೋಮಶೇಖರ ಓಂಕಾ??? ಸೇರಿದಂತೆ ಗ್ರಾಮ ಪಂಚಾಯರ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.