
ವಿಜಯಪುರ:ಮೇ.4: ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ.10 ರಂದು ಜರುಗುವ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ವರ್ಗಗಳ ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು ಜಿಲ್ಲೆಯಾದ್ಯಂತ ವಿಶೇಷಚೇತನರಿಗಾಗಿ ಮಾದರಿ ಮತಗಟ್ಟೆ, ಮಹಿಳಾ ಮತದಾರರಿಗಾಗಿ ಸಖಿ ಮತಗಟ್ಟೆ, ಯುವ ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು ಯುವ ಸಿಬ್ಬಂದಿಯಿಂದ ನಿರ್ವಹಣೆಯ ಮತಗಟ್ಟೆ ಹಾಗೂ ವಿವಿಧ ವಿಷಯನ್ನೊಳಗೊಂಡ ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ನಿರ್ವಹಿಸಲಿದ್ದಾರೆ. ಅದರಂತೆ ಯುವ ಮತದಾರ ಮತಗಟ್ಟೆಗಳಲ್ಲಿ ಯುವ ಅಧಿಕಾರಿ-ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಮೂಲಕ ಮತಗಟ್ಟೆ ಎಲ್ಲ ಚಟುವಟಿಕೆಗಳನ್ನು ನಿಭಾಯಿಸುತ್ತಿರುವುದು ವಿಶೇಷವಾಗಿದೆ.
ವಿಧಾನಸಭಾವಾರು ವಿವರದಂತೆ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 01 ವಿಶೇಷಚೇತನರ ಮಾದರಿ ಮತಗಟ್ಟೆ, 05 ಸಖಿ ಮತಗಟ್ಟೆ, 01 ಯುವ ಮತಗಟ್ಟೆ ಹಾಗೂ 01 ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 01, ವಿಶೇಷಚೇತನ ಮತಗಟ್ಟೆ, 01 ಯುವ ಮತಗಟ್ಟೆ , 01 ಥೀಮ್ ಆಧಾರಿತ ಮತಗಟ್ಟೆ ಹಾಗೂ 01 ಸಾಂಪ್ರದಾಯಿಕ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.
28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 01 ಪರಿಸರ ಆಧಾರಿತ ಮತಗಟ್ಟೆ, 01, ಯುವ ಮತಗಟ್ಟೆ, 01 ಥೀಮ್ ದ್ರಾಕ್ಷಿ ಹಾಗೂ 01 ಕಬ್ಬು ಆಧಾರಿತ ಮತಗಟ್ಟೆ ಹಾಗೂ 01 ವಿಶೇಷಚೇತನರ ಮಾದರಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
29-ಬಬಲೇಶ್ವರ ಮತಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 01 ವಿಶೇಷ ಚೇತನ ಮಾದರಿ ಮತಗಟ್ಟೆ, 01 ಯುವ ಮತದಾರ ಮತಗಟ್ಟೆ, 01, ಥೀಮ್ ಆಧಾರಿತ ಮತಗಟ್ಟೆ ಹಾಗೂ 01 ಸಾಂಪ್ರದಾಯಿಕ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
30-ವಿಜಯಪುರ ನಗರ ಮತಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 01 ವಿಶೇಷ ಚೇತನ ಮಾದರಿ ಮತಗಟ್ಟೆ, 01, ಯುವ ಮತದಾರರ ಮತಗಟ್ಟೆ, 01 ಸಾಂಪ್ರದಾಯಿಕ ಮತಗಟ್ಟೆ ಹಾಗೂ 01 ಥೀಮ್ ಆಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
31-ನಾಗಠಾಣ ಮತಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 01, ವಿಶೇಷ ಚೇತನ ಮಾದರಿ ಮತಗಟ್ಟೆ, 01 ಯುವ ಮತದಾರರ ಮತಗಟ್ಟೆ, 01 ಸಾಂಪ್ರದಾಯಿಕ ಮತಗಟ್ಟೆ ಹಾಗೂ 01 ಥೀಮ್ ಆಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
32-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 01, ವಿಶೇಷ ಚೇತನ ಮಾದರಿ ಮತಗಟ್ಟೆ, 01 ಯುವ ಮತದಾರರ ಮತಗಟ್ಟೆ, 01 ಸಾಂಪ್ರದಾಯಿಕ ಮತಗಟ್ಟೆ ಹಾಗೂ 01 ಥೀಮ್ ಆಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.
33-ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ 05 ಸಖಿ ಮತಗಟ್ಟೆ, 01, ವಿಶೇಷ ಚೇತನ ಮಾದರಿ ಮತಗಟ್ಟೆ, 01 ಯುವ ಮತದಾರರ ಮತಗಟ್ಟೆ, 01 ಸಾಂಪ್ರದಾಯಿಕ ಮತಗಟ್ಟೆ ಹಾಗೂ 01 ಥೀಮ್ ಆಧಾರಿತ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.