ಮತದಾನ ಪ್ರತಿಯೊಬ್ಬರ ಹಕ್ಕು, ಎಲ್ಲರೂ ತಪ್ಪದೇ ಮತದಾನ ಮಾಡಿ : ಸುದೇಶಕುಮಾರ

ಔರಾದ : ಏ.27:ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬೀದರ,ವತಿಯಿಂದ ಹಮ್ಮಿಕೊಂಡಿರುವ ಮತದಾರರ ಜಾಗೃತಿ ಅಭಿಯಾನ ತಾಲ್ಲೂಕಿನ ಗುಡಪಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮೆಡಪಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ಸುದೇಶಕುಮಾರ ಅವರು ಮತದಾನ ಜಾಗೃತಿ ಅಭಿಯಾನ ನಡೆಸಿದರು.
ಕೂಲಿಕಾರರ ಸ್ಥಳಕ್ಕೆ ತೇರಳಿ ಮತದಾನ ಜಾಗೃತಿ ಮೂಡಿಸಿ ಅಲ್ಲಿರುವ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ಭೊದನೆ ಮಾಡಿದರು. ಮತ್ತು ಕೂಲಿಕಾರರಿಗೆ ಪ್ರತಿಜ್ಞಾ ಪತ್ರ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ತಿಳಿಸಿದರು, ಮಾತದಾನ ಪ್ರತಿಯೊಬ್ಬರ ಹಕ್ಕು ಹೀಗಾಗಿ ತಪ್ಪದೆ ಮತದಾನ ಮಾಡಿ, ಯಾರ ಆಸೆ ಆಮಿಷಕ್ಕೆ ಒಳಗಾಗದೆ ತಮಗೆ ಸೂಕ್ತವೆನಿಸಿದ ಅಭ್ಯರ್ಥಿಗೆ ಮತದಾನ ಮಾಡಿ ಎಂದು ತಾಪಂ ಸಹಾಯ ನಿದರ್ಶಕ ಸುದೇಶಕುಮಾರ ತಿಳಿಸಿದರು.
ಎಲ್ಲ ಮತದಾರರು ತಮ್ಮ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಿ, 18 ವರ್ಷ ಪೂರ್ಣಗೊಳಿಸಿದ ಪ್ರತಿಯೊಬ್ಬರು ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತವನ್ನು ಚಲಾಯಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ, ತಾಂತ್ರಿಕ ಸಹಾಯಕರು, ತಾಲೂಕ ಐ.ಇ.ಸಿ ಸಂಯೋಜಕರಾದ ಓಸಿನ್, ಗ್ರಾಮ ಪಂಚಾಯತ ಸಿಬ್ಬಂದಿಯವರು, ನರೇಗಾ ಕೂಲಿಕಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.