ಮತದಾನ ಪ್ರಜಾಪ್ರಭುತ್ವಕ್ಕೆ ವರದಾನ – ಈರೇಶ್ ನಾಯಕ್

ಮಾನ್ವಿ,ಏ.೧೫- ಪ್ರಜಾಪ್ರಭುತ್ವ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡೋಣ ಇದು ನಮ್ಮ ಸಂವಿಧಾನದನಾತ್ಮ ಹಕ್ಕು ಆದರೆ ಮತದಾನ ಗೌಪ್ಯತೆಯನ್ನು ಕಾಪಾಡಬೇಕು, ಸದೃಡ ಭಾರತಕ್ಕಾಗಿ ನಮ್ಮ ಅಮೂಲ್ಯ ಕರ್ತವ್ಯ ಜಾತಿ, ಭಾಷೆ, ಧರ್ಮಕ್ಕೆ ಜೋತುಬೀಳದೆ ಉತ್ತಮ ಚಾರಿತ್ರವುಳ್ಳ ವ್ಯಕ್ತಿಯನ್ನು ಆರಿಸುವ ಸಂಪೂರ್ಣ ಸ್ವಾತಂತ್ರ್ಯ ನಮಗೆ ನಮ್ಮ ಸಂವಿದಾನ ನೀಡಿದೆ ಯಾವುದೇ ಆಸೆ ಅಮಿಷಗಳಿಗೆ ತುತ್ತಾಗದೆ ನಿರ್ಭಿತಿಯಿಂದ ಮತ ಚಲಾಯಿಸೋಣ. ನೈತಿಕವಾಗಿ ಮತದಾನ ಮಾಡೋಣ ಪ್ರಜಾಪ್ರಭುತ್ವ ಗೆಲ್ಲಿಸೋಣ ಎಂದು ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಈರೇಶ್ ನಾಯಕ್ ಕರಡಿಗುಡ್ಡ ಮುಖ್ಯಾತಿಥಿಯಾಗಿ ನುಡಿದರು.
ಭಾರತ ಚುಣಾವಣ ಆಯೋಗ ಕರ್ನಾಟಕ ಸರಕಾರ, ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕಣ ಮತ್ತು ಕ್ರೀಡಾ ಇಲಾಖೆ ರಾಯಚೂರು ಒಳಾಂಗಣ ಕ್ರೀಡಾಂಗಣ ಮಾನವಿ ಮತ್ತು ಯುವ ಸ್ಪಂದನ ರಾಯಚೂರು ಇರುವಗಳ ಸಹಯೋಗದಲ್ಲಿ ಕ್ರೀಡಾಪಟುಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.ಪ್ರತಿಜ್ಞಾ ವಿದಿಯನ್ನು ಕ್ರೀಡಾಂಗಣದ ವ್ಯವಸ್ಥಾಪಕ ಮಹಿಬೂಬ್ ಮದ್ಲಾಪುರ ಬೋದಿಸಿದರು. ಯುವ ಸ್ಪಂದನದ ಕುರಿತು ಯುವ ಪರಿವರ್ತಕ ಮುತ್ತಣ್ಣ ಅತ್ತನೂರು ಮಾಹಿತಿನೀಡಿದರು. ಅನೇಕ ಕ್ರೀಡಾಪಟುಗಳು ಭಾಗವಹಿಸಿದ್ದವು.