ಮತದಾನ ಪವಿತ್ರ ಕೆಲಸ


ಬ್ಯಾಡಗಿ,ಏ.18″ ಚುನಾವಣೆಯಲ್ಲಿ ಪ್ರತಿಯೊಬ್ಬರ ಮತವೂ ಅಮೂಲ್ಯವಾಗಿದ್ದು, ಮತದಾನ ಪವಿತ್ರ ಕೆಲಸವಾಗಿದೆ ಎಂದು ಗ್ರಾಪಂ ಅಭಿವೃದ್ದಿ ಅಧಿಕಾರಿ ಜಿ.ಎಚ್.ತಹಶೀಲ್ದಾರ ತಿಳಿಸಿದರು.
ತಾಲೂಕಿನ ಘಾಳಪೂಜಿ ಗ್ರಾಮದ ಆಡೋಗಟ್ಟಿ ಕೆರೆಯಲ್ಲಿ ಮಂಗಳವಾರ ತಾಲೂಕಾ ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತ ಕಾರ್ಯಾಲಯ ಮತದಾನ ಜಾಗೃತಿ ಅಂಗವಾಗಿ ನರೇಗಾ ಕೂಲಿ ಕಾರ್ಮಿಕರಿಗೆ ಮತದಾನದ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿದ ಅವರು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಮತ ಅತ್ಯಮೂಲ್ಯವಾಗಿದ್ದು, ಮೇ 7 ರಂದು ಪ್ರತಿಯೊಬ್ಬರ ನಡಿಗೆಯು ಮತಗಟ್ಟೆ ಕಡೆಗಿರಲಿ ಎಂದು ಕರೇ ನೀಡಿದರು.
ನರೇಗಾ ಯೋಜನೆಯ ಮಾಹಿತಿ ಶಿಕ್ಷಣ ಸಂಯೋಜಕ ಅಕ್ಷಯ ದೇಶಪಾಂಡೆ ಮಾತನಾಡಿ, ಮೇ 7 ರಂದು ಪ್ರತಿಯೊಬ್ಬರೂ ತಪ್ಪದೆ ಮತಗಟ್ಟೆಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಬಿಎಫ್’ಟಿ ಬಸವರಾಜ, ಗ್ರಾಮ ಕಾಯಕಮಿತ್ರೆ ರೇಣುಕಾ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.