ಮತದಾನ ನಾಗರಿಕರ ಪ್ರಮುಖ ಹಕ್ಕು : ಟಂಕಸಾಲೆ

ಸಂಜೆವಾಣಿ ವಾರ್ತೆ
ಔರಾದ್ :ಫೆ.28: ಮತದಾನ ನಾಗರಿಕರ ಪ್ರಮುಖ ಹಕ್ಕಾಗಿದ್ದು, ತಮ್ಮ ಹಕ್ಕನ್ನು ಕಡ್ಡಾಯ ಮತದಾನದ ಮೂಲಕ ಚಲಾಯಿಸಬೇಕು ಎಂದು ಯನಗುಂದಾ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೇಗೆ ನೆಹರು ಯುವ ಕೆಂದ್ರ ಬೀದರ, ಸುಭಾಷ್ ಚಂದ್ರ ಬೋಸ್ ಯುವಕ ಸಂಘ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಟ್ಟಮಟ್ಟ ಭರವಸೆ ಕೋಶ ವಿಭಾಗದ ಸಹಯೋಗದಲ್ಲಿ ನಡೆದ ಮತದಾರ ಜಾಗೃತಿ ಮತ್ತು ನೋಂದಣಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು ಜಿಲ್ಲಾಡಳಿತದಿಂದ ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದ್ದು, 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆಗಳು ತಮ್ಮ ಹೆಸರು ನೋಂದಾಯಿಸಬಹುದಾಗಿದೆ. ವಿಶೇಷವಾಗಿ ಯುವಕರ ಹಾಗೂ ಭಾವಿ ಮತದಾರರಾಗುವ ವಿಧ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ತಮ್ಮ ಕುಟುಂಬದ ಸದಸ್ಯರಿಗೆ ಹಾಗೂ ಅನಕ್ಷರಸ್ಥ ಮತದಾರರಿಗೆ ತಿಳುವಳಿಕೆ ನೀಡುವುದರ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಶ್ರಮಿಸಬೇಕಾಗಿದೆ ಎಂದರು.
ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೆ ಪ್ರಜ್ಞಾವಂತ ಮತದಾರ ಇರಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಅನೇಕ ಆಸೆ-ಆಮಿಷಗಳು ಮುನ್ನೆಲೆಗೆ ಬರುವ ಸಾಧ್ಯತೆಗಳು ಹೆಚ್ಚಾಗಿದ್ದು ಜಾತಿ, ಧರ್ಮ, ಪ್ರಾದೇಶಿಕತೆ, ಜನಾಂಗ, ಭಾಷೆ, ಹಣ ಹಾಗೂ ಇತರೆ ಅಂಶಗಳು ಇಂದು ಪ್ರಭಾವ ಬೀರುತ್ತಿವೆ. ಇದರಿಂದ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಇಂದು ಮತದಾರರು ಸೋಲುತ್ತಿರುವುದು ಕಂಡು ಬರುತ್ತಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಮತದಾನದ ಹಕ್ಕು ಹೊಂದುವುದು ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತ್ಯಂತ ಸುವ್ಯವಸ್ಥಿತವಾಗಿ, ಸದೃಡವಾಗಿ ನಿರ್ಮಾಣವಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಂಶುಪಾಲರಾದ ಡಾ. ಜೈಶೀಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಅಭಿವೃದ್ಧಿ ಯುವಕರ ಕೈಯಲ್ಲಿ ಅಡಗಿದೆ. ದೇಶದ ಅಭಿವೃದ್ಧಿಗಾಗಿ ಮತದಾನದ ಹಕ್ಕು ಸಂವಿಧಾನದತ್ತವಾಗಿ ಕೆuಟಿಜeಜಿiಟಿeಜಡಮಾಡಲ್ಪಟ್ಟಿದೆ. ಈ ಮತದಾನ ಹಕ್ಕನ್ನು ಯುವಕರು ವಿವೇಚನೆಯಿಂದ ಬಳಸಬೇಕು ಎಂದರು. ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ಅಧ್ಯಕ್ಷ ರತ್ನಾದೀಪ ಕಸ್ತೂರೆ ಪ್ರಾಸ್ತಾವಿಕ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಬಲ ಅಸ್ತ್ರ. ಈ ಅಸ್ತ್ರದ ಮೂಲಕ ನಾಗರಿಕರು ತಮಗೆ ಬೇಕಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೆuಟಿಜeಜಿiಟಿeಜಳ್ಳುವ ಅವಕಾಶ ಇದೆ. ದೇಶದ ಅಭಿವೃದ್ಧಿ ಹಾಗೂ ಸ್ಥಿತಿಗತಿಗಳು ನಿಮ್ಮ ಮತವನ್ನು ಅವಲಂಬಿಸಿದೆ ಎಂದರು. ಪೆÇ್ರೀ. ಮಹೇಶಕುಮಾರ, ಪೆÇ್ರೀ. ಉರ್ವಶಿ ಕುಡ್ಲೆ ಸೇರಿದಂತೆ ಅನೇಕರಿದ್ದರು. ರಾಹುಲ ಜಾಧವ್ ಸ್ವಾಗತಿಸಿ, ನಿರೂಪಿಸಿದರು. ಪೆÇ್ರೀ. ಡಾ. ಅಶೋಕ ಕೋರೆ ವಂದಿಸಿದರು.