ಮತದಾನ – ನಮ್ಮ ಬಹು ದೊಡ್ಡ ಜವಾಬ್ದಾರಿ …


ಸಂಜೆವಾಣಿ ವಾರ್ತೆ
ಸಂಡೂರು: ಮೇ: 7:   ಮತದಾನ ನಮ್ಮ ಬಹುದೊಡ್ಡ ಜವಾಬ್ದಾರಿಯಾಗಿದ್ದು ತಪ್ಪದೆ ಮೇ -10 ರಂದು ಮತದಾನ ಮಾಡುವ ಮೂಲಕ ನಾವುಗಳು ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಹಾಗೂ ನಮ್ಮ ಕರ್ತವ್ಯವನ್ನು ಪಾಲಿಸಬೇಕು ಎಂದು ಸಂಡೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧಿಕಾರಿ ಪ್ರದೀಪ್  ಇವರು ಅಭಿಪ್ರಾಯಪಟ್ಟರು.
 ಶನಿವಾರ ಸಂಡೂರು ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ, ಪುರಸಭೆ ಹಾಗೂ ಮತದಾರ ಸಾಕ್ಷರತಾ ಸಂಘ ಸಂಡೂರು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮತದಾರ ಜಾಗೃತಿ ಸಂಬಂಧ ನಡೆದ “ನಮ್ಮ ನಡೆ -ಮತಗಟ್ಟೆ ಕಡೆ”- ಪ್ರಜಾಪ್ರಭುತ್ವದ ಹಬ್ಬದ ದ್ವಜಾರೋಹಣ ಕಾರ್ಯಕ್ರಮ( ದ್ವಿತೀಯ ಆವೃತ್ತಿ)ದಲ್ಲಿ ದ್ವಜಾರೋಹಣ ಮಾಡಿ ಮಾತನಾಡಿದ ಇವರು ಜನತಂತ್ರದ ಹಬ್ಬವಾದ ಚುನಾವಣೆಯಲ್ಲಿ ಮತದಾರರು ಯಾವುದೇ ಜಾತಿ, ಧರ್ಮ ಅಥವಾ ಆಮಿಷಗಳಿಗೆ ಒಳಗಾಗದೆ ಧರ್ಮ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದು ಹೇಳಿದರು. ಸಂಡೂರು ಮತದಾರ ಸಾಕ್ಷರತಾ ಕೇಂದ್ರದ ತಾಲೂಕು ನೋಡಲ್ ಅಧಿಕಾರಿ ಜಿ ಎಂ ಪ್ರದೀಪ್ ಕುಮಾರ್ ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು.
ಮತದಾನ ಧ್ವಜಾರೋಹಣ ಕಾರ್ಯಕ್ರಮದ ನಂತರ ಪಟ್ಟಣದಲ್ಲಿ ನಡೆದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಖಾಜಾ ಮೈನುದ್ದೀನ್, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ, ನರೇಗಾ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ, ತಿಮ್ಮಪ್ಪ, ಮುತ್ತುರಾಜ್, ಜಡಿಯಪ್ಪ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಸಿಬ್ಬಂದಿ, ಮಹಾಂತೇಶ್, ಭಾಗವಹಿಸಿದ್ದರು.. ತಾಲೂಕಿ ನಾಧ್ಯಂತ 249 ಮತಗಟ್ಟೆ ಕೇಂದ್ರಗಳಲ್ಲಿ ಈ ದಿನ ಮತದಾನ ಜಾಗೃತಿ ಸಂಬಂಧ ‘ ನಮ್ಮ ನಡೆ – ಮತಗಟ್ಟೆ ಕಡೆ”- ಪ್ರಜಾಪ್ರಭುತ್ವದ ಹಬ್ಬದ ದ್ವಜಾರೋಹಣ ಕಾರ್ಯಕ್ರಮ ಹಾಗೂ ಜಾಗೃತಿ ಜಾಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕು ಪಂಚಾಯಿತಿ ಆವರಣದಲ್ಲಿ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು, ಬಿ ಎಲ್ ಓ ಗಳು ಮತದಾನ ಜಾಗೃತಿಯನ್ನು ಸಾರುವಂತಹ ಆಕರ್ಷಣೀಯವಾದ ರಂಗೋಲಿಗಳನ್ನು ಬಿಡಿಸಿದ್ದರು..