ಮತದಾನ ನಮ್ಮ ಪವಿತ್ರ ಹಕ್ಕು-ಶ್ರೀನಿವಾಸ ರೆಡ್ಡಿ

ಚಿತ್ರದುರ್ಗ.ಏ.೨೫; : ಮತದಾನ ನಮ್ಮ ಪವಿತ್ರ ಹಕ್ಕು. ಮತದಾನವನ್ನು ಎಲ್ಲರೂ ಕಡ್ಡಾಯವಾಗಿ ಮಾಡಬೇಕು ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಪ್ರವಾಚಕ ಶ್ರೀನಿವಾಸ ರೆಡ್ಡಿ ಹೇಳಿದರು. ನಗರದ ಸಿ.ಟಿ.ಇ ನಲ್ಲಿ ಈಚೆಗೆ ಸ್ವೀಪ್ ಕಾರ್ಯಕ್ರಮದಡಿ ಬಿ.ಇಡಿ ಮತ್ತು ಡಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ರಾಷ್ಟç ಭಾರತದಲ್ಲಿ ಪ್ರಜೆಗಳೇ ನಿಜವಾದ ಪ್ರಭುಗಳು. ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು ಮತದಾನ ಪ್ರಕ್ರಿಯೆಯಲ್ಲಿ ಪ್ರಶಿಕ್ಷಣಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಪ್ಪದೇ ಮತ ಹಾಕಬೇಕು ಎಂದು ತಿಳಿಸಿದರು. ಪ್ರವಾಚಕರಾದ ಟಿ.ಜಿ.ಲೀಲಾವತಿ, ಸುಜಾತ, ಉಪನ್ಯಾಸಕರಾದ ರಾಜಣ್ಣ, ಹನುಮಂತರಾಯಪ್ಪ, ಕಾಲೇಜಿನ ಸ್ವೀಪ್ ನೋಡಲ್ ಅಧಿಕಾರಿ ಕೊಟ್ರೇಶ್, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಬಸವರಾಜು, ಏಕನಾಥ್, ಭೀಮಪ್ಪ, ಮಲ್ಲಿಕಾರ್ಜುನ, ರಾಜಕುಮಾರ್, ಬಿ.ಇ.ಡಿ ಮತ್ತು ಡಿ.ಇಡಿ ಪ್ರಶಿಕ್ಷಣಾರ್ಥಿಗಳು ಹಾಗೂ ಮತ್ತಿತರರಿದ್ದರು.