ಮತದಾನ ದಿನದಂದು ಪ್ರತಿ 2 ತಾಸಿಗೊಮ್ಮೆ ಮತದಾನದ ಮಾಹಿತಿ ನೀಡಬೇಕು: ಗೋವಿಂದರೆಡ್ಡಿ

ಬೀದರ. ಮೇ. 9: ಮೇ.10 ರಂದು ನಡೆಯುವ ಮತದಾನದ ಮಾಹಿತಿಯನ್ನು ಪ್ರತಿ 2 ತಾಸಿಗೊಮ್ಮೆ ತಮ್ಮ ಮತಗಟ್ಟೆಯಲ್ಲಾದ ಮತದಾನದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ಅಧಿಕಾರಿಗಳು ನೀಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಚುನಾವಣೆಗೆ ನಿಯೋಜಿತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾತನಾಡಿದರು.

ಜಿಲ್ಲೆಯ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಪಸರ್ಂಟೇಜ ಕೊಡಲು ರಿಸರ್ವ ಸಿಬ್ಬಂದಿಗಳನ್ನು ನಿಯೋಜನೆ ಮಾಡುವದರ ಜೊತೆಗೆ ಅವರ ಮಾಹಿತಿಯನ್ನು ಬಿಎಲ್‍ಓ ಗ್ರೂಪ್‍ಗಳಲ್ಲಿ ಹಾಕಬೇಕು ಮತ್ತು ಮ್ಯಾಪಿಂಗ್ ಮಾಡಿಕೊಂಡು ಯಾರು ಯಾವ ಕೆಲಸ ಮಾಡಬೇಕೆಂಬುದರ ಕುರಿತು ಮುಂಚಿತವಾಗಿ ಅವರಿಗೆ ಜವಾಬ್ದಾರಿಗಳನ್ನು ನೀಡಿದಾಗ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತವೆ ಎಂದರು.

ಜಿಲ್ಲೆಯ ಎಲ್ಲಾ ಪೆÇೀಲಿಂಗ ಬೂತಗಳ ಮಾಹಿತಿಯನ್ನು ಪ್ರತಿ 2 ತಾಸಿಗೊಮ್ಮೆ ಸರಿಯಾದ ಸಮಯದಲ್ಲಿ ನೀಡಲು ಆಪರೇಟರಗಳು ಮಾಹಿತಿ ನೀಡುವುದರ ಕುರಿತು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ಮೇ 10 ರಂದು ಬೆಳಿಗ್ಗೆ 5:30 ಗಂಟೆಗೆ ಎಲ್ಲಾ ಮತಗಟ್ಟೆಗಳಿಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತಗಟ್ಟೆಗಳಲ್ಲಿ ಹಾಜರಿರಬೇಕು ಎಂದು ಹೇಳಿದರು.

ಎನ್.ಐ.ಸಿ ಅಧಿಕಾರಿ ಶ್ರೀನಿವಾಸ ಅವರು ಮತಗಟ್ಟೆಯಲ್ಲಿ ಪ್ರತಿ 2 ತಾಸಿಗೊಮ್ಮೆ ಮಾಹಿತಿಯನ್ನು ಯಾವ ರೀತಿಯಲ್ಲಿ ಕೊಡಬೇಕು ಹಾಗೂ ಗೂಗಲ್ ಮತ್ತು ಎನಕೋರಲ್ಲಿ ಮಾಹಿತಿಯನ್ನು ಯಾವ ರೀತಿಯಲ್ಲಿ ಎಂಟ್ರೀ ಮಾಡಬೇಕೆಂಬುದರ ಕುರಿತು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿದರು.

ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ. ನೋಡಲ್ ಅಧಿಕಾರಿಳು. ಆರ್.ಓ. ಎ.ಆರ್.ಓ ಮತ್ತು ಚುನಾವಣೆಗೆÉ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.