
ಮೈಸೂರು,ಏ.21:- ವಿಧಾನ ಸಭಾ ಚುನಾವಣೆ ಮತದಾನ ದಿನದಂದು 12 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು
ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ವೀಕ್ಷಕರು ಹಾಗೂ ಪೆÇಲೀಸ್ ವೀಕ್ಷಕರುಗಳ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು ಜಿಲ್ಲೆಯ 2905 ಮತಗಟ್ಟೆಗಳಲ್ಲಿ ಸಮರ್ಪಕ ಮತದಾನ ಪ್ರಕ್ರಿಯೆಗೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವಲ್ನರಬಲ್ (ದುರ್ಬಲ) ಮತದಾರರಿರುವ ಮತಗಟ್ಟೆಗಳಲ್ಲಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡಲು ಹಾಗೂ ವಿಕಲಚೇತನರು ಮತ್ತು 80 ವರ್ಷ ಪೂರೈಸಿರುವ ಮತದಾರರು ಮತದಾನ ಮಾಡಲು ಸಿದ್ಧತೆಗಳನ್ನು ಹಾಗೂ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಈಗಾಗಲೇ 97 ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ ಹಾಗೂ 1.44 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ.ಚೆಕ್ ಪೆÇೀಸ್ಟ್ ಗಳಲ್ಲಿ ನಮ್ಮ ಸಿಬ್ಬಂದಿ ಬಿಸಿಲಿನಲ್ಲಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸುತದ್ದಾರೆ.ಚುನಾವಣಾ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡುವಂತೆ ಸ್ವೀಪ್ ಸಮಿತಿಯ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು
ಸುವಿಧಾ,ಸಿ-ವಿಜಿಲ್,ಎಂಸಿಸಿ,ಎಂಸಿಎಂಸಿ ಸೇರಿದಂತೆ ವಿವಿಧ ತಂಡಗಳ ಕಾರ್ಯಗಳ ಬಗೆಗೆ ಮಾಹಿತಿ ನೀಡಿದರು
ಸಭೆಯಲ್ಲಿ ಸಾಮಾನ್ಯ ವೀಕ್ಷಕರು,ಪೂಲೀಸ್ ವೀಕ್ಷಕರು, ಪೆÇೀಲೀಸ್ ಆಯುಕ್ತರು ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಇದ್ದರು.