ಮತದಾನ ದಾನವಲ್ಲ, ಅದು ಮತಾಧಿಕಾರ – ಡಾ. ಹೊನ್ನೂರಾಲಿ

ಸಂಜೆವಾಣಿ ವಾರ್ತೆ
ಸಂಡೂರು: ಜು: 20: ಮತದಾನ  ಅದು ದಾನವಲ್ಲ, ಮತಾಧಿಕಾರ ಎನ್ನುವುದು ಪ್ರಜಾಪ್ರಭುತ್ವದ ಮೂಲವಾಗಿದೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಮತಾಧಿಕಾರವನ್ನು ಚಲಾಯಿಸುವ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆಮಾಡಬೇಕಾಗಿದೆ ಎಂದು ಬಳ್ಳಾರಿಯ ಎಸ್.ಎಸ್.ಎ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಜ್ಯಶಾಸ್ತ್ರವಿಭಾಗದ ಮುಖ್ಯಸ್ಥ ಡಾ. ಹೊನ್ನೂರಾಲಿ.ಐ. ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಪ್ರಸಾರಾಂಗ ಮತ್ತು ಕನ್ನಡ ವಿಭಾಗ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪ್ರಚಾರೋಪನ್ಯಾಸ ಮಾಲೆ-2 ಕಾರ್ಯಕ್ರಮದಲ್ಲಿ ಮತಾಧಿಕಾರ ಎನ್ನುವ ವಿಷಯಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಪುಸ್ತಕಗಳನ್ನು ಕೊಳ್ಳುವ ಅಭ್ಯಾಸ ಇದ್ದರೆ ಅವುಗಳನ್ನು ಸಮಯಕ್ಕೆ ತಕ್ಕಂತೆ ಅಭ್ಯಾಸ ಮಾಡಿ ಬಳಸಿಕೊಳ್ಳಲು ಸಹಕಾರಿಯಾಗುತ್ತದೆ, ಅಲ್ಲದೆ ಇಂದಿನ ವಿದ್ಯಾರ್ಥಿಗಳು ಕೊಳ್ಳುವ ಮತ್ತು ಓದುವ ಹವ್ಯಾಸದಿಂದ ದೂರುಳಿಯುತ್ತಿದ್ದಾರೆ, ಇಂದು ಪ್ರಜಾಪ್ರಭುತ್ವ ಬಹುದೊಡ್ಡ ರಾಷ್ಟ್ರ ಭಾರತ ಸಂವಿಧಾನದಲ್ಲಿ ದೇಶದ ಪ್ರಜೆಗಳಿಗೆ ಅತಿ ಅಮೂಲ್ಯವಾದ ಹಕ್ಕು ಎಂದರೆ ಮತದಾನ ಎನ್ನುತ್ತೇವೆ, ಅದರೆ ಅದು ಮತಾಧಿಕಾರವಾಗಿದೆ, ಏಕೆಂದರೆ ನಾವು ಅಧಿಕಾರಯುತವಾಗಿ ನಮಗೆ ಬೇಕಾದ ಉತ್ತಮ ಪ್ರತಿನಿಧಿಯನ್ನು ಆಯ್ಕೆಮಾಡಿಕೊಳ್ಳಲು ಸಹಕಾರಿಯಾಗಿದೆ, ಪ್ರತಿಯೊಬ್ಬರ ಮತವೂ ಸಹ ಬಹು ಮುಖ್ಯ ಎನ್ನುವುದಕ್ಕೆ ಅನೇಕ ಚುನಾವಣೆಗಳಲ್ಲಿ ಕೇವಲ 1 ಮತದಿಂದ ಆಯ್ಕೆಯಾದ ಬಹಳಷ್ಟು ಉದಾಹರಣೆಗಳು ಇವೆ, ಅದ್ದರಿಂದ ಕಡ್ಡಾಯವಾಗಿ ನಮ್ಮ ಅಧಿಕಾರವನ್ನು ಚಲಾಯಿಸಬೇಕು, ಅದರೆ ಬಹಳಷ್ಟು ಜನರು ತಮ್ಮ ಮತಗಳನ್ನು ಕುಂಟುನೆಪಗಳಿಂದ ಮತಚಾಲಯಿಸುವುದಿಲ್ಲ, ಅದರಲ್ಲೂ ವಿದ್ಯಾವಂತರು, ಶಿಕ್ಷಣ ಪಡೆದವರು, ನಗರವಾಸಿಗಳು ಮತದಾನ ಮಾಡುವಲ್ಲಿ ಉದಾಸೀನತೆ ಇದೆ, ಅದರೆ ಗ್ರಾಮೀಣಭಾಗದಲ್ಲಿಯ ಜನರು ಅತಿ ಹೆಚ್ಚು ಮತದಾನ ಮಾಡುತ್ತಾರೆ, ಅಲ್ಲದೆ ಪ್ರಶ್ನೆಗಳನ್ನು ಸಹ ಮಾಡುತ್ತಾರೆ, ಅದ್ದರಿಂದ ಮತಗಟ್ಟೆ ದೂರವಿದೆ, ಅದರಿಂದ ನಮಗೇನು ಪ್ರಯೋಜನ, ಸರತಿಯಲ್ಲಿ ನಿಲ್ಲಲಾಗದೇ ನೆಪಮಾತ್ರದಿಂದ ಮತಾಧಿಕಾರದಿಂದ ದೂರಉಳಿಯುವುದು ಸರಿಯಲ್ಲ ಇದರಿಂದ ನಾವು ನಮ್ಮ ಅಧಿಕಾರವನ್ನೇ ಕಳೆದುಕೊಂಡಂತಾಗುತ್ತದೆ ಅದ್ದರಿಂದ ಕಡ್ಡಾಯವಾಗಿ ಅಮಿಷಗಳಿಗೆ ಒಳಗಾಗದೇ ಮತದಾನ ಮಾಡಬೇಕು ಅದು ನಮ್ಮ ಅಧಿಕಾರ, ಅದು ದಾನವಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಸಾರಾಂಗದ ನಿರ್ದೇಶಕರಾದ ಡಾ. ಬಿ.ಜಿ. ಕನಕೇಶಮೂರ್ತಿ ಮಾತನಾಡಿ ವಿದ್ಯಾರ್ಥಿಗಳು ಎಂದರೆ ಉಪನ್ಯಾಸಕರ ಅನ್ನದಾತರು ಅಂತಹ ಅನ್ನದಾತರಿಗೆ ಜ್ಞಾನದ ದಾಸೋಹ ಬಹುಮುಖ್ಯವಾದುದು ಅದ್ದರಿಂದ ಪ್ರಸಾರಾಂಗ ಗ್ರಾಮೀಣ ಪ್ರದೇಶಗಳಲ್ಲಿ ಉಪನ್ಯಾಸ ಮಾಲೆಯನ್ನು ಏರ್ಪಡಿಸಿ ಅವುಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವತ್ತ ವಿಶ್ವವಿದ್ಯಾಲಯ ಪ್ರಥಮ ಹೆಜ್ಜೆಯನ್ನು ವಿಜಯನಗ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಪ್ರಾಸಾರಂಗ ಬಳ್ಳಾರಿ ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ದಶಕಗಳ ಘಟಿಕೋತ್ಸವ ಭಾಷಣಗಳ ಸಂಗ್ರಹವನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ, ಅದೇ ರೀತಿ ಉಪನ್ಯಾಸ ಸರಣಿಯನ್ನು ಸಹ ಪ್ರಕಟಿಸಲಾಗುವುದು, ಇಂತಹ ಪ್ರಸಾರಾಂಗದ ಕೆಲಸವನ್ನು ಮೈಸೂರು ವಿಶ್ವವಿದ್ಯಾನಿಲಯ ಪ್ರಥಮವಾಗಿ ಮಾಡುತ್ತಾ ಬಂದಿದೆ, ಅದಕ್ಕೆ ಕುವೆಂಪು ಅವರು, ಇತರ ಹಲವಾರು ಗಣ್ಯರು ವಿಶ್ವವಿದ್ಯಾಲಯ ಎಂದರೆ ಸಂಶೋಧನೆ, ಬೋಧನೆ ಮತ್ತು ಪ್ರಸಾರಾಂಗ ಪ್ರಮುಖ ಅಂಗಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯ ಮಾಡದ ಕಾರ್ಯವನ್ನು ಅಂದು ಮೈಸೂರು ವಿಶ್ವವಿದ್ಯಾನಿಲಯ ಮಾಡಿದ ಹೆಮ್ಮೆ ಇದೆ, ಅಂದರೆ ಪ್ರಸಾರಾಂಗ ಪ್ರತಿಯೊಬ್ಬರಿಗೂ ಜ್ಞಾನ ಹಂಚುವ ಕಾರ್ಯವನ್ನು ಮಾಡುತ್ತದೆ ಎಂದು ಅದು ನಡೆದುಬಂದ ದಾರಿ, ಅದರ ಗುರಿಗಳನ್ನು, ಉದ್ದೇಶಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ.ಹುಚ್ಚುಸಾಬ್ ಅವರು ಮಾತನಾಡಿ ಯುವಶಕ್ತಿ ದೇಶದ ಶಕ್ತಿ, ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಕಣ್ಣುಗಳಿದ್ದ ಹಾಗೆ, ಇಂದು ಮತಾಧಿಕಾರ ಕುರಿತು ವಿಶೇಷ ಉಪನ್ಯಾಸವನ್ನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು ಉತ್ತಮ ಸಂಗತಿ ಇದರಿಂದ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಮತ್ತು ಅದರ ಕಾರ್ಯದ ಬಗ್ಗೆ ಪೂರ್ಣ ಮಾಹಿತಿ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಈ.ಜಿ.ರೇಖಾ ಅವರು ಸ್ವಾಗತಿಸಿದರು, ಉಪನ್ಯಾಸಕಿ ಮಾನಸ ಪ್ರಾರ್ಥಿಸಿದರು, ಅತಿಥಿಗಳಾಗ ಉಪನ್ಯಾಸಕಿ ಪ್ರಿಯದರ್ಶಿನಿ ಠಾಕೂರ್ ಉಪಸ್ಥಿತರಿದ್ದರು, ಪತ್ರಕರ್ತರಾದ ಅರಳಿಕುಮಾರಸ್ವಾಮಿ, ಅತಿಥಿಗಳಿಗೆ ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು, ಬಸವರಾಜ ಬಣಕಾರ ನಿರೂಪಿಸಿ ವಂದಿಸಿದರು, ವಿದ್ಯಾರ್ಥಿಗಳು, ಉಪನ್ಯಾಸಕವೃಂದದವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಪ್ರಸಾರಾಂಗ ಮತ್ತು ಕನ್ನಡ ವಿಭಾಗ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಯೋಗದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪ್ರಚಾರೋಪನ್ಯಾಸ ಮಾಲೆ-2 ಕಾರ್ಯಕ್ರಮದಲ್ಲಿ ಮತಾಧಿಕಾರ ಎನ್ನುವ ವಿಷಯಕುರಿತು ಡಾ. ಹೊನ್ನೂರಾಲಿ.ಐ. ಉಪನ್ಯಾಸ ನೀಡಿದರು