ಮತದಾನ ಜಾಗೃತಿ ಹಾಗೂ ಸಹಿ ಅಭಿಯಾನ

ಬೀದರ:ಎ.26:ಎ.ಬಿ.ವಿ.ಪಿ. ಬೀದರ ವತಿಯಿಂದ ನಗರದ ಬಸ ನಿಲ್ದಾಣದಲ್ಲಿ ರಾಷ್ಟ್ರದ ಹಿತಕ್ಕಾಗಿ, ಸಮಾಜದ ನವನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ನ್ಯಾಯ ಸಮೃದ್ಧ ಮತ್ತು ಶಾಂತಿಯುತ ಚುನಾವಣೆಗಳು ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಚುನಾವಣೆಗಳಲ್ಲಿ ನಿರ್ಭಿತರಾಗಿ ಜಾತಿ, ಮತ, ಭಾಷೆ, ಹಣ ಹೆಂಡಕ್ಕೆ ಪ್ರಭಾವಿತರಾಗದೇ 100ಕ್ಕೆ ನೂರು ಮತದಾನವನ್ನು ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಶಿವಶರಣಪ್ಪಾ ಪಾಟೀಲ ವಕೀಲರು, ಅಭಾವಿಪ ಜಿಲ್ಲಾ ಪ್ರಮುಖರು ಯೋಗೇಶ ಎಂ.ಬಿ., ನಗರ ಸಂಘಟನಾ ಕಾರ್ಯದರ್ಶಿ ಹೇಮಂತ, ಸಿದ್ಧಾರ್ಥ ಭಾವಿದೊಡ್ಡಿ, ಶಶಿಕಾಂತ ರಾಕಲೆ ನಗರ ಸಹ ಕಾರ್ಯದರ್ಶಿ, ಓಂಕಾರ, ಅಮರ, ಸತೀಶ, ಮಹೇಶ, ಇತರೆ ಕಾರ್ಯಕರ್ತರು ಉಪಸ್ಥಿತರಿದ್ದರು.