ಮತದಾನ ಜಾಗೃತಿ ಸೈಕಲ್ ಜಾಥಾಕ್ಕೆ ಚಾಲನೆ

ವಿಜಯಪುರ:ಮೇ.1: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದ ಅಂಗವಾಗಿ ರವಿವಾರ ನಗರದ ಶಿವಾಜಿ ವೃತ್ತದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ನಂ.3ರ ರಿಂದ ಹಮ್ಮಿಕೊಂಡ ಸೈಕಲ್ ಜಾಥಾಕ್ಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಚಾಲನೆ ನೀಡಿದರು.
ಸೈಕಲ್ ಜಾಥಾವು ನಗರದ ಶಿವಾಜಿ ವೃತ್ತ, ಕವಳಿಗೇಟ್, ತಾಜ್‍ಬಾವಡಿ, ಜೋಡಗುಮ್ಮಟ, ಕೇಂದ್ರ ಬಸ್ ನಿಲ್ದಾಣ, ಬಾಗಲಕೋಟ್ ಕ್ರಾಸ್, ಜಿಲ್ಲಾ ನ್ಯಾಯಾಲಯ, ಜಲನಗರ, ಜಿಲ್ಲಾ ಪಂಚಾಯತ್ ದ್ವಾರ ಮೂಲಕ ಕನಕದಾಸ ಬಡಾವಣೆ, ಕಸ್ತೂರಿ ಕಾಲನಿ, ಶಾಂತಿನಗರ, ಹಕೀಂ ಚೌಕ್, ಪವಾಡ್ ಬಸವೇಶ್ವರ ದೇವಸ್ಥಾನ, ನಗರದ ಸ್ಟೇಶನ್ ರಸ್ತಗೆ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವರೆಗೆ ಸಂಚರಿಸಿ ಮತದಾನ ಜಾಗೃತಿ ಮೂಡಿಸಿತು.