
ಯಾದಗಿರಿ, ಏ.13: ಕೋಲಿ ಸಮಾಜದ ನಾಯಕರ, ಹೋರಾಟಗಾರರಾದ ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ವಿಠಲ್ ಹೇರೂರರ 70ನೇ ಹುಟ್ಟುಹಬ್ಬವನ್ನು ನಗರದ ಹಳೆ ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ,. ಮುದ್ನಾಳ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಹಾಗೂ ವಿಠಲ್ ಹೇರೂರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಕೂಡ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದು, ಈ ಬಾರಿ ವಿಶೇಷವಾಗಿ ಮಾಡಬೇಕೆಂದು ಯೋಚಿಸಿ ರೈತ ಬೆಳೆದಂತಹ ಸುಮಾರು 2 ಕ್ವಿಂಟಲ್ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಂಚುವ ಮೂಲಕ ವಿಶೇಷವಾಗಿ ಆಚರಿಸಲಾಯಿತು ಎಂದರು.
ಅದರಲ್ಲೂ ಚುನಾವಣೆ ಇರುವುದರಿಂದ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ರಾಜ್ಯದಲ್ಲಿ ಮತದಾನ ಕಡಿಮೆ ಆಗುತ್ತಿರುವುದನ್ನು ತಿಳಿಸಿದ ಅವರು, ಇದು ಹೆಚ್ಚಾಗಬೇಕು, ಪ್ರತಿಯೊಬ್ಬರು ಮತಚಲಾಯಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮತದಾನ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗಲಾಯಿತು. ಮತದಾನ ಮಾಡುವವನೇ ಶೂರ, ಮತದಾನ ನಮ್ಮ ಹಕ್ಕು, ಒಳ್ಳೆ ವ್ಯಕ್ತಿಗೆ ಆಯ್ಕೆ ಮಾಡುವುದು ಮತದಾರನ ಜವಬ್ದಾರಿ ಮತದಾನ ಪ್ರಜಾಪ್ರಭುತ್ವದ ಹಬ್ಬ, ಹಬ್ಬದಲ್ಲಿ ನೀವು ಭಾಗವಹಿಸಿ, ಕಡ್ಡಾಯವಾಗಿ ಮತದಾನ ಮಾಡಿ ಇತರರಿಗೆ ಮಾದರಿಯಾಗಿ, ಆಮಿಷಗಳನ್ನು ತಿರಸ್ಕರಿಸಿ, ಉತ್ತಮ ಪ್ರಜೆ ಉತ್ತಮ ಆಯ್ಕೆ, ಮತದಾನ ಶ್ರೇಷ್ಟ ಹಕ್ಕು, ಪ್ರಜೆಗಳ ಸೇವಕರು ಬೇಕು, ಪ್ರಜೆಗಳನ್ನೇ ಆಳುವವರಲ್ಲ, ನಿಮ್ಮ ಮತ ನಿಮ್ಮ ಭವಿಷ್ಯ, ನಿಮ್ಮ ಹಕ್ಕು ನಮ್ಮ ಹೆಮ್ಮೆ, ಸಾಕು ಜಾತಿ ಹಾಕು ಒಂದು ಮತ ಎಂಬ ಘೋಷಣೆಗಳನ್ನು ಪ್ರದರ್ಶನ ಮಾಡಲಾಯಿತು.
ಶರಣಪ್ಪ ಹದನೂರ, ಪ್ರಭು ಕೋಡಲ್, ನಾಗಪ್ಪ ತಯಡಿಬಿಡಿ, ರಾಮಕೃಷ್ಣ ಸುರಪುರ ಭೀಮರಾಯ, ರವಿ, ಹಣಮಂತ, ವಿಶ್ವನಾಥ, ನಿಂಗಪ್ಪ ಮಳ್ಳಳ್ಳಿ, ಶೇಖರ, ಕೀರ್ತೆಪ್ಪ ಕಾಡಂಗೇರಿ, ರಾಮು, ಅಯ್ಯಣ್ಣ, ಸುಬಣ್ಣಗೌಡ ನಾಲ್ವಡಿಗಿ, ಶಿವಪ್ಪ ಹೆಡಗಿಮುದ್ರ, ಮರೆಪ್ಪ ಕೊಡೇಕಲ್, ಈರಪ್ಪ ನಾಟೇಕರ್, ಚಂದ್ರಪ್ಪ ಸೇರಿದಂತೆ ಅನೇಕರು ವಿಠಲ್ ಹೇರೂರ ಅಭಿಮಾನಿಗಳು, ಅಂಬಿಗರ ಚೌಡಯ್ಯ ಪದಾಧಿಕಾರಿಗಳು ಇದ್ದರು.